|| ದೇವಿಗೆ ಆರತಿ ಹಾಡು ||
ಮುತ್ತು ಪಚ್ಚೆ ಕೆಂಪುರತ್ನ ಹವಳದಾರತೀ .....
ಮತ್ತೆ ಮತ್ತೆ ಬೆಳಗುವೇನು ವಜ್ರದಾರತಿ
ವಜ್ರದಾರತೀ .... ನಿನಗೆ ವಜ್ರದಾರತಿ (೨)||ಪ||
ಮುತ್ತಿನಂತೆ ಹೊಳೆಯುತಿಹ ಮುಕ್ತಿ ಪಥವ ತೋರುತಿಹ
ಶಕ್ತಿ ನಿನಗೆ ಪಾಡುತಲಿ ಎತ್ತುವೆ ನಾನಾರತಿ ||೧||
ಭುವನೇಶ್ವರಿ, ಜಗದೀಶ್ವರಿ, ಬನಶಂಕರಿ ನಿನಗೆ
ಭವ್ಯ ದಿವ್ಯ ರೂಪಿಣಿ ರಾಜರಾಜೇಶ್ವರಿ
ಭೈರವೀ ..... ಶಾಂಭವಿ, ಜಾಹ್ನವಿ
ಆತ್ಮಜ್ಯೋತಿಯಿಂದಲಿ ಬೆಳಗುವೆ ನಾನಾರತಿ ||೨||
ದೇವಿ ಶಾರದಾಂಬೆಯ ಚರಣದಾಸಿ ವಂದಿಸುವೆ
ಭಕ್ತಿ ಪ್ರೇಮದಿಂದಲೀ ಬೆಳಗುವೆ ನಾನಾರತೀ ||೩||
ಚಿತ್ತದಲ್ಲಿ ನೆಲಸಿರುವ ಚಿತ್ರ ರೂಪಿಣೀ ನಿನಗೆ
ಚಿನ್ನದ ಹರಿವಾಣದಲ್ಲಿ ಬೆಳಗುವೆ ನಾನಾರತೀ ||೪||
0 ಕಾಮೆಂಟ್‌ಗಳು