|| ಶ್ರೀ ಚಂದ್ರಶೇಖರ ಭಾರತೀ ಸ್ತುತಿ ||
ನಾನು ನನ್ನದು ಎಂಬ ವ್ಯಾಮೋಹಕ್ಕೆ ಸಿಲುಕಿ
ದೀನರಾದೆವು ಎಮ್ಮ ಕಾಯೋ ದಯಾನಿಧೇ.....
ಜ್ಞಾನವ ನೀಡೆಮಗೆ ಗುರುವೇ
ಆನತ ಜನ ಪರಿಪಾಲನ ಪ್ರಭುವೇ ||
ಸುಂದರಮುಖಿ ಶ್ರೀ ಶಾರದಾಂಬೆಯಾ-
ನಂದದಿ ಪೂಜಿಪ ನಿರ್ಮಲ ನೇತ್ರನೆ
ಚಂದ್ರಮೌಳೀ ಪ್ರಿಯ ಪ್ರಣವಸ್ವರೂಪನೆ
ಚಂದ್ರಶೇಖರ ಭಾರತೀ ಗುರುವೇ ||೧||
0 ಕಾಮೆಂಟ್‌ಗಳು