|| ಶ್ರೀ ಶ್ರೀ ಶ್ರೀ ವೆಂಕಟಾಚಲ ಅವಧೂತ ಸ್ತುತಿ ||
kannadabhajanlyrics.blogspot.com, venkatachala avadhoota images |
ಪಾದ ಪದುಮ ಕಂಡೆನು ನಮ್ಮ
ಗುರುವರನ ಅವಧೂತನ ||ಪ||
ಪಾಪಗಳನೇ ಕಳೆವ ಪಾದ
ಪುಣ್ಯಕಾರ್ಯ ಪ್ರೇರಿಪ ಪಾದ
ಗುರುವರನ ಅವಧೂತನ ||ಪ||
ಮುಕ್ಕೋಟಿ ದೇವತೆಗಳು ಸದಾ ನೆಲೆಸಿಹ ಪಾದ
ಆಗಮ ನಿಗಮಗಳು ಸ್ತುತಿಸಿ ಪಾಡಿಹ ಪಾದ
ಅಂತರಂಗದ ಭಕುತರ ಸದಾ ಕಾಯ್ವ
ಗುರುವರನ ಅವಧೂತನ ದಿವ್ಯ ಪಾದ ||೧||
ಚಿತ್ತ ಸುಖವ ನೀವ ಪಾದ ವಿತ್ತ ಬ್ರಾಂತಿ ಕಳೆವ ಪಾದ
ಅಚಿಂತ್ಯ ರೂಪನಾಗಿ ಆನಂದವೀವ ಪಾದ
ಭಾವಶುದ್ಧಿಯಿಂದ ಬಜಿಸೆ ಭಾಗ್ಯವ ಕೊಡುವ ಪಾದ
ಭವಸಾಗರವ ದಾಟಲು ನೌಕೆಯಂತಿಹ ಸದ್ಗುರು ||೧||
ತಮವನ್ನು ಕಳೆವ ಪಾದ ತನ್ಮಯತೆಯವೀವ ಪಾದ
ತಂದೆ-ತಾಯಿ ತಾನಾಗಿ ಸಲಹುತಿಹ ಗುರುಪಾದ
ಅಂಬಾ ಸುತನ ಐಶ್ವರ್ಯ ಈ ಪಾದ
ಸಖರಾಯ ಪುರವಾಸಿ ಗುರುನಾಥನ ಮುದ್ದು ||೨||
0 ಕಾಮೆಂಟ್‌ಗಳು