|| ದೇವಿ ಭಜನೆ ||
ವಾಣಿ ಪರಮಕಲ್ಯಾಣಿ ನಮೋ ಅಜನ
ರಾಣಿ ಪಂಕಜಪಾಣಿ |
ಭಳಿರೆ ಭಳಿರೆಂಬೆ-ಭಕುತಜನರಂಬೆ
ಸುಳಿಯೆ ಶುಭನಿತಂಬೆ...ಪುತ್ಥಳಿಗೊಂಬೆ
ಹೊಳೆಹೊಳೆಯುವ ಮುಖಮುಕುರದ ಬಿಂಬ
ಇಳೆಯೊಳು ಸರಿಗಾಣೆ ಶಾರದಾಂಬೆ ||೧||
ಶರಣು ಶರಣು ದೇವಿ-ಸ್ಮರಣೆ ಮಾತ್ರದಿ ಕಾಯ್ದೆ
ಚರಣದಂದಿಗೆ ಠೀವಿ ನಲಿನಲಿಯುವಿ ಆ-
ಭರಣಗಳಿಟ್ಟು ಸುಖವನ್ನೀವಿ
ಧರೆಯೊಳು ಹರಿಣಾಕ್ಷಿ ಸಲಹೆ ವಾಗ್ದೇವಿ ||೨||
ಜಯ ಜಯ ಜಗನ್ಮಾತೆ.-ಜಗದೊಳು ಪ್ರಖ್ಯಾತೆ
ದಯಮಾಡು ಧವಳಗೀತೆ - ಮಾತೇ
ಹಯವದನನ ಪದಭಜಕಪ್ರೀತೆ
ನಯದಿ ಗೆಲಿಸೆನ್ನ ಮಾತೆ ವಿಧಿಜಾತೆ ||೩||
0 ಕಾಮೆಂಟ್‌ಗಳು