|| ಸರ್ವದೇವರಿಗೆ ಆರತಿ ||
ರಾಗ : ಗೋರಖ ಕಲ್ಯಾಣ
ತಾಳ : ಭಜನಿ ಠೇಕಾ
ಜಯ ಮಂಗಲಂ | ನಿತ್ಯಾ | ಶುಭಮಂಗಲಂ |
ಭಯ ನಿವಾರಣಾ ನಮ್ಮ ಹಯವದನ ಮೂರುತಿಗೆ
ಶ್ರೀರಮಾ ದೇವಿಗೆ | ಹಿರಿಯಮಗ ಬ್ರಹ್ಮನಿಗೆ |
ಮೂರು ಅವತಾರ ಮಾರುತಿರಾಯಗೆ ||
ಆಶಾರದಾ ದೇವಿ ಭಾರತಿ ದ್ರೌ ಪದಿಗೆ |
ಗರುಡಶೇಷರಿಗೆ ಮಹಾರುದ್ರ ದೇವರಿಗೆ
ತುಲಸಿ ಸೌಪರ್ಣಿವಾರುಣಿ ದೇವಿ ಪಾರ್ವತಿಗೆ |
ಸರ್ವದೇವತೆಗಳರವರ ಪತ್ನಿಯರಿಗೆ ||
ದೇವಋಷಿ ಬ್ರಹ್ಮ ಋಷಿ ಅವರವರ ಪತ್ನಿಯರು |
ರಾಜಋಷಿ ಮಾನುಷೋತ್ತಮರು ಯತಿಗಳಿಗೆ |
ಮಂಗಳಾರತಿ ಭಕ್ತಿಯಿಂದ ಮಾಡಲು ಸದಾ
ಮಂಗಲವೆ ಆಗುವದು ರಂಗನೋಲಿವಾ ||
ಮಂಗಲಾಂಗಿಯು ಮಹಾಲಕುಮಿತಾ ಒಲಿವಳು
ಮಂಗನೊಲಿಯುವನು|ಭೂಪತಿ ವಿಠ್ಠಲದೂತಾ
0 ಕಾಮೆಂಟ್‌ಗಳು