ಬಂದನೋ ಗೋವಿಂದ ಚಂದದಿ ಆನಂದ - Bandano Govinda Chandadi Ananda

|| ಗೋವಿಂದ ಸ್ತುತಿ ||




ಬಂದನೋ ಗೋವಿಂದ ಚಂದದಿ ಆನಂದ

ಸುಂದರಿಯ ಮಂದಿರಕ್ಕೆ ನಂದನಕಂದಾ

ನಂದನಕಂದಾ ||ಬಂದನೋ||




ಕಾನನದಲ್ಲಿ ಬಲು ಧೀರನಾದಲ್ಲಿ

ವೇಣುನಾದವೋ ತಾಕೂಡಿ ಮೋದವು ||ಕಾನನ||

ಜಾಣನಿವನು ಸುಮ ಬಾಣ ಪಿತನು||2||

ಮಾನಿನಿ ಮನೆಗಳಲ್ಲಿ ಗಾನ ಮಾಡುತಾ

ಗಾನ ಮಾಡುತಾ ||ಬಂದನೋ||



ಓಡಿ ಬಂದರು,ಬಲು ಬೇಡಿಕೊಂಡರು

ಗಾಡಿಕಾರನು ಅವರ ಕೂಡಿ ಮೆರೆದನೋ

||ಓಡಿ||

ಮಾಡಿದ ಜಾಲ ವಾಸುದೇವ ವಿಠಲ ||2||

ಮಾಡಿದ ಮನ ಮಾಡಿದ ತಾ ಕೂಡಿದನಾಗ

ತಾ ಕೂಡಿದನಾಗ. ||ಬಂದನೋ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು