|| ಹನುಮ ಸ್ತುತಿ ||
ಮುದ್ದು ಮುಖದಾತ ನಮ್ಮ
ಮುಖ್ಯಪ್ರಾಣನಾಥನೊ ||ಮುದ್ದು||
ಸದ್ಗುಣ ವಂದಿತ ವಾಯುಜಾತನೊ
ರಾಮದೂತನೋ... ||ಸದ್ಗುಣ||
||ಮುದ್ದು||
ಸಾಗರವನ್ನು ದಾಟಿದ ಧೀರನೊ
ಧೀರ ಕಂಠೀರವನೋ
ರಾಗ ತಾಳ ಮೇಳದಲ್ಲಿ ಜಾಣನೊ
ಪ್ರವೀಣನೊ ||ರಾಗ||
||ಮುದ್ದು||
ಜಾನಕೀಶನ ವೈರಿ ಶೂಲನೊ
ಶೂಲನೋ ಗಂಭೀರನೋ
ಮಾನಿನಿ ಸೀತೆಯ ಕಂಡು ಬಂದನೋ
ಮುಂದೆ ನಿಂದನೋ
ವಾನರ ರೂಪಿಲಿ ಮುದ್ರೆಯಿತ್ತನೋ
ಇತ್ತನೊ ವನ ಕಿತ್ತನೋ
ಆ ನಗರವನೆಲ್ಲ ಸುಟ್ಟನೊ ಬಹು ದಿಟ್ಟನೊ ||ಮುದ್ದು||
ನಂಬಿದ ಭಕ್ತರ ಕಾಯ್ಕ ದಾತನೊ
ದಾತನೊ ಪ್ರಖ್ಯಾತನೊ ||ನಂಬಿದ||
ಅಂಬುಜಾಸನಪದಕೆ ಬಂದು ||3||
ನಿಂತನೋ ಹನುಮಂತನೋ
ಹಯವದನನ ಭಕ್ತ ಚೆಲ್ವ ತೇಜನೊ
ತೇಜನೋ ಯತಿರಾಜನೊ
ದಾನವಕುಲಕೆ ಬಹು ಭೀಮನೋ
ಸಾರ್ವಭೌಮನೊ ||ಮುದ್ದು||
0 ಕಾಮೆಂಟ್ಗಳು