ದ್ವಿರದ ವದನ ಪಾರ್ವತಿ ತನಯ - Dwirada Vadana Parvathi Tanaya

|| ಗಣಪತಿ ಸ್ತುತಿ ||





ದ್ವಿರದ ವದನ ಪಾರ್ವತಿ ತನಯ | ನಿನ್ನಯ | 

ಚರಣಾರವಿಂದದ್ವಯವ ತೋರೋ ದೇವಾ ॥ಪ॥ 



ಈಶ್ವರ ಸುತನೆ ಮೋದಕ ಪ್ರಿಯನೆ |

ಪಾಶಾಂಕುಶ ಧರನೆ | ನನ್ನಯ ಭವ

ಪಾಶ ಬಿಡಿಸಿ ಶ್ರೀಶನ ತೋರೊ |

ಆಕಾಶದ ಅಭಿಮಾನಿ ನಿನಗೆ ನಮಿಸುವೆನೊ ||1|| 



ಸಿಂಧೂರ ವದನನೆ ಮಂಗಳ ಕಾಯನೆ |

ಮಂದಾರ ಪುಷ್ಪ ಪ್ರಿಯನೆ| ನನ್ನಯ ಹೃದಯ|

ಮಂದಿರದಲಿ ಬಂದು ಆನಂದವೀಯೊ |

ಇಂದಿರಾರಮಣನ ಚಂದದಿ ತೋರೊ ||2||



ತೋರೋ ನಿನ್ನಯ ಚಾರು ಚರಣ ಗಣನಾಥನೆ |

ತರಳ ನಾನು ನಿನ್ನಯ ನೆರಳಲ್ಲಿ ಇರಿಸೊ |

ಹರಿಯೊಲುಮೆ ರುಕ್ಮಿ ಣಿಕೃಷ್ಣ ನಂದನನಿಗೆ |

ದೊರಕುವಂತೆ ಕರುಣಿಸು ವಕ್ರತುಂಡನೆ ||3|| 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು