ಗಿರಿಧರ ಶ್ರೀಧರ ಮುಕುಂದ ಮಾಧವ - Giridhara Sridhara Mukunda Madhava

ಗೋವಿಂದ ಸ್ತುತಿ





ಗಿರಿಧರ ಶ್ರೀಧರ ಮುಕುಂದ ಮಾಧವ

ರಾಧಾರಮಣ ನಮೋ ನಮೋ |

ಯಾದವನಂದನ ಯದು ಕುಲತಿಲಕ

ಪದ್ಮನಾಭ ಹರಿ ನಮೋ ನಮೋ ||೧||


ನಂದ ಕುಮಾರ ನವನೀತ ಚೋರ

ಕಂಜಲೋಚನ ನಮೋ ನಮೋ

ಸುಂದರ ರೂಪ ಮಂದರ ಗಿರಿಧರ

ಇಂದಿರೆ ರಮಣ ನಮೋ ನಮೋ ||೨||


ಗೋಪಿ ವಲ್ಲಭ ಗೋವರ್ಧನ ಧರ

ಶ್ರೀಪತಿ ಕೃಷ್ಣ ನಮೋ ನಮೋ

ಗಾನ ವಿಲೋಲ ಧೀನ ರಕ್ಷಕ

ಅನುಪಮ ರೂಪ ನಮೋ ನಮೋ ||೩||


ದಾನವಾಂತಕ ಕಲ್ಮಷ ದೂರ

ಜ್ಞಾನಿಗಳರಸ ನಮೋ ನಮೋ

ದೇವಕಿ ನಂದನ ಸುಂದರ ಕಾಯ

ಗೋವಿಂದ ಯಾದವ ನಮೋ ನಮೋ ||೪||


ಭವ ಭಯ ಭಂಜನ ಶಾಪವಿಮೋಚನ

ತ್ರಿವಿಕ್ರಮ ರೂಪ ನಮೋ ನಮೋ

ಅಮಿತ ಪರಾಕ್ರಮ ಅಖಿಲಾಧಾರ

ಅಮರ ವಂದಿತ ನಮೋ ನಮೋ ||೫||


ಕಮಲ ಲೋಚನ ಕಾಮ ಜನಕ ಹರಿ

ಕಾಮಿತ ವರದಾ ನಮೋ ನಮೋ

ರುಕ್ಮಿಣಿ ವಲ್ಲಭ ಶ್ರೀ ಹರಿಕೃಷ್ಣ

ಅಕ್ರೂರ ವರದ ನಮೋ ನಮೋ ||೬||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು