|| ತತ್ವಪದ ||
ತಾನೆನ್ನಬಹುದೇ ಈ ದೇಹವ|ತಾನೆನ್ನಬಹುದೇ ||
ಜ್ಞಾನಮೂರುತಿ ತಾನು ಕಾಣುತೆಲ್ಲವ ನಿಲ್ಲಿ |
ಪ್ರಾಣ ಹಾರಿದ ಮೇಲೆ ಹೂಳುವೋ ಹೆಣವಿದ ||
ನಿತ್ಯನಲ್ಲೆಂದೆ ಸುಪ್ತಿಯೊಳಿದ್ದ ಸತ್ತ್ವವ ಕೊಂದೆ
ಮೃತ್ತಿಕೆಯನು ತಂದೆ ಭೃತ್ಯ ನಾನದಕೆಂದೆ |
ಸತ್ತು ಹುಟ್ಟುತ ಬಂದೆ ಪೃಥ್ವಿಯೊಳಗೆ ಬೆಂದೆ ||
ಯಾರು ನೀ ಪೇಳೈ|ದೇಹವ ಬಿಟ್ಟು ಬೇರೆ ನೀನೇಳೈ
ತೋರುವೀ ತನುವಿಗೆ ಬೇರೆ ನೀನಾದೊಡೆ |
ಹಾರಿತೀ ಜಗವೆಲ್ಲ ತೋರಲಿನ್ನೇನಿಲ್ಲಾ ||
ಪೊರೆಯೋ ಶ್ರೀಹರಿಯೇ|ಎಂಬುವದೊಂದೇ |
ಹರಿಯ ನೀನರಿಯೇ
ಹರಿಯಿರುವಂದವನರಿಯಲು ನೀ ನಮ್ಮ
ಗುರುಶಂಕರಾರ್ಯನೋಳು ಬೆರೆಯೋ ನರಕುರಿಯೇ ||
0 ಕಾಮೆಂಟ್‌ಗಳು