ಜಯದೇವ ಜಯದೇವ ಜಯ ಶ್ರೀ ಗುರುವರಗೇ - Jayadeva Jayadeva Jaya Shree Guruvarage

|| ಗುರು ಶ್ರೀ ಶ್ರೀ ಶ್ರೀಧರ ಸ್ವಾಮಿ ಭಜನೆ ||





ಜಯದೇವ ಜಯದೇವ 

ಜಯ ಶ್ರೀ ಗುರುವರಗೇ ಜಯ ಸದ್ಗುರುವರಗೇ

ಜಯ ಜಯ ನಿತ್ಯ ನಿರಂಜನ ನಿರುತಾನಂದನಿಗೇ

ಜಯದೇವ ಜಯದೇವ ॥ಪ॥ 


ಮೂರುಗುಣಗಳಕಾರ್ಯದಿ ಸೇರದಿರುವವಗೆ -ಸೇರದಿರುವವಗೆ

ತೋರುವ ಈ ವಿಶ್ವಕೆ ಆಧಾರವೆನಿಸಿಹಗೆ 

ಧೀರನಾಗಿಹ ಚಿತ್ಸುಖ ಸಾರರೂಪನಿಗೆ - ಸಾರರೂಪನಿಗೆ

ನಾರೀನರ ಭೇದಗಳನು ತೋರದ ಪ್ರಭುವರಗೆ 

ಜಯದೇವ ಜಯದೇವ ॥೧॥ 


ಗಣನೆಗೆಸಿಗದಿಹನಗಣಿತ ಘನಚಿದ್ರೂಪನಿಗೆ -ಘನಚಿದ್ರೂಪನಿಗೆ

ದಿನಮಣಿಶಶಿವಹ್ನಿಗಳನು ಅನುದಿನ ಬೆಳಗಿಪಗೆ ಜನಮೃತಿ

ಇರದಿಹನದ್ವಯ ಚಿನುಮಯಸೆನಿಸಿಹಗೆ -

ಚಿನುಮಯನೆನಿಸಿಹಗೆ ಮುನಿಜನಹೃದಯವಿಹಾರಿಗೆ

ಘನಗುರುಮೂರುತಿಗ ಜಯದೇವ ಜಯದೇವ ॥೨॥ 


ರಜತಮಸಾತ್ವಿಕವಿರಹಿತ ಅಜನೆನಿಸಿರುವವಗೆ - ಅಜನೆನಿಸಿರುವವಗೆ

ನಿಜಜೀವೇಶರಿಗಾಶ್ರಯ ತ್ರಿಜಗವ್ಯಾಪಕಗೆ

ಅಜಹರಿಹರ ಜಗವಂದಿತ ಭಜಕರ ಸಲಹುವಗೆ -

ಭಜಕರ ಸಲಹುವಗೆ

ಸುಜನರ ನಿಜ ಮೃದು ಹೃದಯದಿ ವಿಜಯದಿ

ನಲಿಯುವಗೆ ಜಯದೇವ ಜಯದೇವ ।೩॥ 


ಸಾಧನೆಯಿಂ ಪರಿಪಕ್ವದ ಸಾಧಕ ಜನಮನಕೆ - ಸಾಧಕ ಜನಮನಕೆ

ಮೋದದಿ ತನ್ನಯ ತತ್ವದ ಬೋಧವನರುಹಲಿಕೆ

ಆದಿಮೂರುತಿ ಶ್ರೀ ಪ್ರಭು ತಾ ದಯಗೊಳ್ಳುತಲಿ - ತಾ ದಯಗೊಳ್ಳುತಲಿ

ಮೇದಿನಿಯೊಳಗವತರಿಸಿಹ ಶ್ರೀಧರ ನಾಮದಲಿ 

ಜಯದೇವ ಜಯದೇವ ॥೪॥ 


ಜಯದೇವ ಜಯದೇವ 

ಜಯ ಶ್ರೀ ಗುರುವರಗೇ ಜಯ ಸದ್ಗುರುವರಗೇ

ಜಯ ಜಯ ನಿತ್ಯ ನಿರಂಜನ ನಿರುತಾನಂದನಿಗೇ

ಜಯದೇವ ಜಯದೇವ ॥






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು