ನಡಿರೆ ನಡಿರೆ ನೋಡುವ ಶ್ರೀಕೃಷ್ಣನ - Nadire Nadire Noduva Sri Krishnana

|| ಗೋವಿಂದ ಸ್ತುತಿ ||

 ರಚನೆ : ಶ್ರೀ ಮಹಿಪತಿ ದಾಸರು 







ನಡಿರೆ ನಡಿರೆ ನೋಡುವ ಶ್ರೀಕೃಷ್ಣನ

ನಡಿರೆ ನಡಿರೆ ನೋಡುವ ॥ಪ॥


ನಡಿರೆ ನೋಡುವ ಬನ್ನಿ ತುಡುಗ ಶ್ರೀಕೃಷ್ಣನ

ಅಡಿಗಳಾಶ್ರಯ ಹಿಡಿವ ಮಂಡಲದೊಳು ॥ಅ.ಪ.|| 


ತುಡುಗತನದಿ ಬಂದು ಕಡಿದ ಬೆಣ್ಣೆಯ ಮೆದ್ದು

ಒಡನೆ ಗೋಪ್ಯೇರ ಕಾಡಿದ ನೋಡಮ್ಮ | 

ಬಿಡದೆ ಕಾಳಿಂಗನ ಹೆಡೆಯ ಮೆಟ್ಟಿದ ನೋಡಿ

ತಡೆಯದೆ ಧುಮುಕಿದ ಮಡುವಿನೊಳು ರಂಗ ॥೧॥ 


ಕ್ರೀಡಿಸಿ ಗೋಪ್ಯೇರ ಉಡುಗೆ ಸೆಳೆದುಕೊಂಡು

ಒಡನೆ ಗಿಡವನೇರಿದ ನೋಡಮ್ಮ | 

ಮಾಡಿದ ಮಣಿದ ಬಿಡದೆ ಬೇಡಿಸಿಕೊಂಡು

ಒಡನೆ ಉಡುಗೆ ನೀಡಿದ ನೋಡಮ್ಮ ॥೨॥ 


ಬಡವರಿಗಳವಲ್ಲ ಪೊಡವಿಯೊಳಗೆ ಇದು

ಆಡಿದಾನಂದದಾಟವ ನೋಡಮ್ಮ 

ಹಿಡಿಯ ಹೋಗಲು ಮೂಢ ಮಹಿಪತಿಯ ನೋಡಿ

ಒಡಲ ಹೊಕ್ಕು ಕೂಡಿದ ಒಡೆಯನಮ್ಮ ॥೩॥





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು