ನಂದ ನಂದನ ಬಾರೋ - Nanda Nandana Baro

|| ಗೋವಿಂದ ಸ್ತುತಿ ||





ನಂದ ನಂದನ ಬಾರೋ ॥ ಪ॥

ಎನಗೆ ನಿನ್ನ ಸೌಂದರ್ಯ ಲೀಲೆಯ

ತೋರೋ ತೋರೋ॥ ಅಪ॥ 


ಕೊಳಲನೂದುವ ಚಂದದಿ ಹಣೆಯಲ್ಲಿ

ಸುಳಿಗೂದಲಾಡುವಂದದಿ ಚಂದದಿ| 

ತುಳಸೀ ಪುಷ್ಪದ ಬೃಂದದಿ ಪುರದಾಚೆಯಲ್ಲಿ

ನಲಿ ನಲಿದಾಡುವಂದದಿ ಚಂದದಿ 

ಘಲಘಲಘಲಘಲ ನಲಿವ ಕುಂಡಲ ನಿಜ

ತೋಳುಗಳೊಪ್ಪುವ ಬಾಪುರಿಗಳಿಂದಲಿ 

ಥಳ ಥಳ ಥಳ ಥಳ ಕಾಂತಿಗಳಿಂದ ॥ ೧॥ 


ಮಣಿಯಿಲ್ಲದ ಕೌಸ್ತುಭದಿ ಎಸೆವ ಮುಕುಟ

ಮಣಿಹಾರ ಶ್ರೀವತ್ಸದಿ ವತ್ಸದಿ 

ಮಣಿಮಯ ಕಿರೀಟದಿ ಅಂದದೊಪ್ಪುವ

ಅಗಣಿತ ಮಹ ತೇಜದಿ ತೇಜದಿ 

ಝಣ ಝಣ ಝಣ ಝಣ ಝಂ ಪರಿಮಳದಿ 

ಕಿಣಿ ಕಿಣಿ ಕಿಣಿಕಿಣಿ ಕಿಂಕಿಣಿ ರವದಿಂದ 

ಠಣ ಠಣ ಠಣ ಉಡು ರುಂಗೆಗಳಿಂದ ॥ ೨॥


ಅಮಿತ ಜಯ ಪಾಂಡುರಂಗ ವಿಜಯ

ಭವ ಅಮರೇಶ ನಿಕರ ತುಂಗ

ತುಂಗ ವಿಮಲಪುರಿ ಅಂತರಂಗ 

ಪುರಂದರ ವಿಠಲೇಶ ನಿಕರ ತುಂಗ ತುಂಗ

ಘಮ ಘಮ ಘಮ ಘಮ ಘಂ ಪರಿಮಳದಿ 

ಅಮರರು ಮೃದಂಗ ತಾಳಗಳಿಂದ

ಧಿಮಿ ಧಿಮಿ ಧಿಮಿ ಧಿಮಿ ಧಿಂ ಧಿಂ ಎನ್ನುತ ॥ ೩॥






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು