ಪರಮಹಂಸ ಶ್ರೀ ಶ್ರೀಧರ ಗುರುವರ - Paramahamsa Sri Sridhara Guruvara

|| ಶ್ರೀ ಶ್ರೀಧರ ಗುರುಗಳ ಸ್ತುತಿ ||






ಪರಮಹಂಸ ಶ್ರೀ ಶ್ರೀಧರ ಗುರುವರ

ಕರುಣಾಮಯನೆ ನಮೋ ನಮೋ

ಪರಶಿವಮುರುತಿ ನರಹರಿ ಯತಿವರ

ನಿರುತವು ಭಜಿಸುವೆ ಪಾಲಿಸು ದೇವಾ ||  1 ||


ಜಗದೋಧರ ಸದ್ಗುರು ಶ್ರೀಧರ

ನಿಗಮಾತೀತ ನಮೋ ನಮೋ

ಯೋಗವಿಚಾರ ರಾಗವಿದೂರ

ಜಗದಾದಿಗುರುವೇ ಕರುಣಾದಿ ಕಾಯೋ ||  2 ||


ಗುಣಗಣಭೂಷಣ ಚಿನುಮಯರೂಪ

ಋಣ ಪರಿಹಾರಕ ನಮೋ ನಮೋ

ಗುಣಗಂಭೀರ ವನಮಾಲಾಧರ

ಪ್ರಣವಾನಂದನೆ ಪೊರೆಯೆ ದೇವಾ ||  3 || 


ಮಂದದಾರ ಶ್ರೀ ಗುರು ಗೋವಿಂದ

ಮಂಗಳರೂಪ ನಮೋ ನಮೋ

ಶಂಕರಾನಂದ ಶಿವಾನಂದಪ್ರಿಯ

ಇಂದುಕಲಾಧರ ಸಲಹೈ ದೇವ ||  4 ||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು