|| ಉಡುಪಿ ಶ್ರೀಕೃಷ್ಣ ಸ್ತುತಿ ||
ಅಂಗಳದೊಳಗಾಡಬಾರಯ್ಯ ಮುದ್ದು
ರಂಗ ನಿನ್ನಯ ಮುಖದೋರಯ್ಯ ||ಪ||
ಅರ್ಧರಾತ್ರಿಯಲ್ಲವತರಿಸಿದ್ಯೊ
ಹೋಗಿ ಮುದ್ದು ಗೋಪಿಯ ಸುತನೆನಿಸಿದ್ಯೊ
ಭದ್ರದೇವಿಯರ ನೀ ಕಳಿಸಿದ್ಯೊ
ಬಂದಿದ್ದ ಪೂತನಿಯ ಸಂಹರಿಸಿದ್ಯೊ ||೧||
ವತ್ಸಕಾಯುತಲ್ಹೋಗಿ ವನದೊಳು ಬಂದ
ಕಿಚ್ಚು ನುಂಗಿದೆ ನಿನ್ ವದನದೊಳು
ಸ್ವಚ್ಛಮಾಡಿದಿ ಕಾಳಿಜಲಗಳು
ತೋರೆ ಕುಕ್ಷಿಯೊಳಗೆ ತ್ರಿಜಗಂಗಳು ||೨||
ದೇವಕ್ಕಿದೇವಿ ಯಶೋದಾನೆ
ವಸುದೇವ ನಂದ ಬಲರಾಮಗೆ
ಎದುರುಬಾರೋ ಭೂದೇವಿರಮಣನೆ
ಭೀಮೇಶ ಕೃಷ್ಣನೆ ಶ್ಯಾಮವರಣನೆ||೩||

0 ಕಾಮೆಂಟ್ಗಳು