ವೇಣುನಾದಪ್ರಿಯ ಗೋಪಾಲಕೃಷ್ಣ Venu Nadapriya Gopala Krishna

|| ಗೋವಿಂದ ಸ್ತುತಿ ||

 ರಚನೆ : ಶ್ರೀ ವಾದಿರಾಜರು 






ವೇಣುನಾದಪ್ರಿಯ ಗೋಪಾಲಕೃಷ್ಣ ॥ಪ॥


ವೇಣುನಾದ ವಿನೋದ ಮುಕುಂದ

ಗಾನ ವಿನೋದ ಶೃಂಗಾರ ಗೋಪಾಲ ॥ಅಪ॥


ವಂದಿತ ಚರಣ ವಸುಧದೆಯಾಭರಣ

ಇಂದಿರಾ ರಮಣ ಇನಕೋಟಿತೇಜ

ಮಂದರಧರ ಗೋವಿಂದ ಮುಕುಂದ

ಸಿಂಧುಶಯನ ಹರಿ ಕಂದರ್ಪ ಜನಕ ॥ ೧॥


ನವನೀತಚ ಜೋರ ನಂದಕುಮಾರ

ಭುವನೈಕ ವೀರ ಬುದ್ಧಿ ವಿಸ್ತಾರ

ರವಿಕೋಟಿ ತೇಜ ರಘುವಂಶ ರಾಜ

ದಿವಿಜ ವಂದಿತ ದನುಜಾರಿ ಗೋಪಾಲ ॥ ೨॥


ಪರಮದಯಾಳು ಪಾವನ ಮೂರ್ತಿ

ವರಕೀರ್ತಿ ಹಾರ ಶೃಂಗಾರ ಲೋಲ

ಉರಗೇಂದ್ರ ಶಯನ ವರ ಹಯ ವದನ

ಶರಣ ರಕ್ಷಕ ಪಾಹಿ ಕೋದಂಡ ರಾಮ ॥ ೩॥





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು