|| ಲಕ್ಷ್ಮಿ ಸ್ತುತಿ ||
ರಚನೆ : ಶ್ರೀ ಅರಳುಮಲ್ಲಿಗೆ ಪಾರ್ಥಸಾರಥಿ.
ರಾಗ ಸಂಯೋಜನೆ : ಡಾ ಹರೀಶ ಹೆಗಡೆ.
ಬಾರಮ್ಮ ಲಕ್ಷ್ಮೀದೇವಿ ನೀ ಬಾರಮ್ಮ
ನಿನ್ನ ಕರುಣಕಟಾಕ್ಷವ ಬೀರುತ ಬಾರೆ||ಪ||
ಜಾಣೆ ಶ್ರೀಧರ ರಾಣಿ ಪನ್ನಗವೇಣಿ
ಮಂಗಳವಾಣಿ ಜಗಸುತ್ರಾಣಿ
ವಂದಿಸುವೆ ನಿನ್ನ ಚರಣ ಕಮಲಕೆ
ಇಂದಿರೇಶ ಪ್ರಿಯೆ ಇಂದೆ ಬಾರೆಲೆ||೧||
ಸಜ್ಜನರ ಪಾಲಿಪ ಅಭಿಮಾನಿ ಪಾವನಿ
ಗೆಜ್ಜೆಯ ಕಾಲಿನ ನಾದಗಳಿಂದಲಿ
ಪದಾಕ್ಷಿ ಪದ್ಮಮುಖಿ ಪದ್ಮ ಸಂಭವಳಾಗಿ
ಹರಿಪಾದ ಪದ್ಮವ ತೋರುವ ಬಾರೆಲೆ||೨||
ನಿಗಮ ವೇದ್ಯಳೆ ನಿತ್ಯ ವಂದ್ಯಳೆ
ನಿಜ ಸುಜ್ಞಾನವ ನಿರುತ ಎಮಗಿತ್ತು
ಪಾರ್ಥಸಾರಥಿ ವಿಠಲನ ಕಿಂಕರಗೆ
ಪಂಕಜ ನಾಭನ ಪಾದ ಪಂಕಜ ತೋರುತ||೩||

0 ಕಾಮೆಂಟ್‌ಗಳು