ಅಡವಿಯ ಶಿವನೆ ಬಡವಿಯು ನಾನು- Adaviya Shivane Badavanu Nanu

|| ಶಿವ ಸ್ತುತಿ  ||




ಅಡವಿಯ ಶಿವನೆ ಬಡವಿಯು ನಾನು

ಬೇಡುವೆ ನಾ ನಿನ್ನ ಸಿರಿಯಾ ಬೇಡುವೆ ನಾ ನಿನ್ನ ||ಪ||


ಭಕ್ತಿಯ ಸಿರಿಯನ್ನು ನಿನ್ನ ಧ್ಯಾನದ ಸಿರಿಯನ್ನು

ಪೂಜಿಸುವ ಸಿರಿಯಾ ರಾಧಿಸುವಾ ಸಿರಿಯಾ ||1||


ನಿನ್ನಾ ಭಜನೆಯ ಮಾಡುತ ನನ್ನೆ ಮರೆಯುವ ಸಿರಿಯ

ನನ್ನೆ ಮರೆತು ನಿನ್ನಲ್ಲಿ ಒಂದಾಗುವ ಸಿರಿಯನ್ನು ||2||


ನಿಸ್ವಾರ್ಥದ ಸಿರಿಯನ್ನು ನಿತ್ಯಾನಂದದ ಸಿರಿಯನ್ನು

ನಿತ್ಯವೂ ನಿನ್ನ ಸೇವೆಯನ್ನು ಮಾಡುವ ಸಿರಿಯನ್ನು ||3||


ಜ್ಞಾನದ ಸಿರಿಯನ್ನು ವೈರಾಗ್ಯದ ಸಿರಿಯನ್ನು

ಗುರುದೇವ ನುಡಿದಂತೆ ನಡೆಯುವ ಸಿರಿಯನ್ನು ||4||


ಮೌನದ ಸಿರಿಯನ್ನು ಏಕಾಂತದ ಸಿರಿಯನ್ನು

ಎಲ್ಲೆಲ್ಲೂ ಇರುವ ನಿನ್ನ ನೋಡುವ ಸಿರಿಯನ್ನು ||5||


ಶ್ರೀ ರಕ್ಷೆಯ ಸಿರಿಯನ್ನು ನಿನ್ನ ಪ್ರೀತಿಯ ಸಿರಿಯನ್ನು

ಮಲ್ಲೇಶ ಗುರುವಿನ ಕರುಣೆಯ ಸಿರಿಯನ್ನು ||6||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು