|| ಶ್ರೀರಾಮ ಸ್ತುತಿ ||
ರಾಮನ ಜನುಮವು ಹರುಷವ ತಂದಿತು
ಪಾವನವೆನಿಸಿತು ನವಮಿ ದಿನ
ದೇವನು ಮಾನವ ರೂಪವ ಹೊಂದಲು
ನೂತನಗೊಂಡಿತು ಜನರ ಮನ ||ಪ ||
ನಾಮವು ಹಲವಿರೆ ಭಕುತಿಯು ಬೇರೆ
ಜೀವನ ನಡೆಸಲು ಗುರಿ ಇಹುದು
ನೋಯುವನವನೆ ಕಾಯುವನವನೆ
ಬೇಡವು ಭೇದವದೆಂದೆಂದು ||೧||
ಮಾಡುವ ಕಾಯಕ ಕೆಡುಕನು ಧಮನಿಸಿ
ಸಾಗಲಿ ಒಳಿತಿನ ದಾರಿಯಲಿ
ತೀರದ ಬಯಕೆಯ ಬಯಸದೆ ನಡೆದರೆ
ಬಾಚುವ ನಮ್ಮನು ಕೂಟದಲಿ ||೨||
ನೀತಿಯ ನಂಬುತ ಬೆಳೆಸುವ ತಾಳ್ಮೆಯ
ಸೇತುವು ನೀನೆ ಶ್ರೀರಾಮ
ಮೀರದ ಮಿತಿಯಲಿ ಬದುಕುವ ಜಗದಲಿ
ಪ್ರೀತಿಯ ಹರಿಸುವ ರಘುರಾಮ ||೩||
0 ಕಾಮೆಂಟ್‌ಗಳು