|| ಗೋವಿಂದ ಸ್ತುತಿ ||
ಬಂದು ನಿಲ್ಲೋ ಕಣ್ಣ ಮುಂದೆ ।।ಪ।।
ಬಂದು ನಿಲ್ಲೋ ನನ್ನ ಪಾದಕ್ಕೆ ವಂದಿಪೆ
ಇಂದಿರೆಯರಸ ಗೋವಿಂದ ಮುಕುಂದ ನೀ ।।ಅ.ಪ।।
ಅರಳಿದ ಕೆಂದಾವರೆಯ ಧಿಕ್ಕರಿಸುವ
ಚರಣಾರವಿಂದವ ನಿರುತ ತೋರು ನೀನು ।।೧।।
ನೀಲಾಲಕ ಭ್ರಮರಕುಂತಲಮಂಡಿತ
ಮೇಲಾದ ರಾಕೇಂದು ಮುಖವ ತೋರಿಸುತಲಿ ।।೨।।
ಪದುಮನೇತ್ರನೆ ನಿನ್ನ ಸದನವೆನುತ ಎನ್ನ
ಹೃದಯದೊಳಗೆ ನಿಂತು ನಾ ಮುದದಿ ಭಜಿಸುವಂತೆ||೩
ಕರಿಯ ಮೊರೆಯ ಕೇಳಿ ಕರುಣದಿಂ ಬಂದಂತೆ
ಕರೆದಾಗ ನಿನ್ನ ದಿವ್ಯಚರಣವ ತೋರಿಸುತ ।।೪।।
ಅಜಭವಾದಿಗಳಿಗೆ ನಿಜಪದವನಿತ್ತಂತೆ
ಭಜಿಪ ಭಕ್ತರಿಗೊಲಿವ ವಿಜಯವಿಠಲರೇಯ ।।೫।।
0 ಕಾಮೆಂಟ್ಗಳು