ಹುತ್ತದಿಂದ ಎದ್ದು ಬಂದು - Huttadinda Eddu Bandu

|| ಸುಬ್ರಹ್ಮಣ್ಯ ಸ್ತುತಿ ||





ಹುತ್ತದಿಂದ ಎದ್ದು ಬಂದು

ಭಕ್ತರನ್ನು ಕಾಯುವಂತ

ನಾಗರೂಪ ಧರಿಸಿ ಬಂದ ಸುಬ್ರಹ್ಮಣ್ಯ  ||ಹುತ್ತದಿಂದ||

                         

ಶೂರನೀತ ಶೂರಧೀರನೀತ||೨||

ಸ್ವಾಮಿ  ಸ್ಕಂದಸ್ವಾಮಿ ಗತಿನೀನೆ ಎಂದೆ

ಸುಬ್ರಹ್ಮಣ್ಯ ಸುಬ್ರಹ್ಮಣ್ಯ 

ಸುಬ್ರಹ್ಮಣ್ಯ ಕುಕ್ಕೆ ಸುಬ್ರಹ್ಮಣ್ಯ  ||ಸುಬ್ರಹ್ಮಣ್ಯ||

                        

ಪಾರ್ವತಿಯ ಮುದ್ದುಕಂದ 

ತಾರಕನ ಕೊಂದ ಧೀರ

ಕುಕ್ಕೆ ಕ್ಷೇತ್ರದಲ್ಲಿ ನಿಂತ ಕಾರ್ತಿಕೇಯ

ಕುಕ್ಕೆ ಸುಬ್ರಹ್ಮಣ್ಯ ||ಪಾರ್ವತಿಯ||

ಕೈಲಾಸದಿ ಇಳಿದು ಬಂದು

ಭೂಲೋಕವ ಸುತ್ತಿ ಬಂದು

ಕುಕ್ಕೆ ಕ್ಷೇತ್ರದಲ್ಲಿ  ನಿಂದ ಸ್ಕಂದ ಸ್ವಾಮಿ  

ನೀನು ಗೌರಿ ತನಯ


ರೋಗರುಜಿನ  ದೋಷಗಳಿಗೆ 

ಮುಕ್ತಿಯನ್ನು ನೀಡುವಂತ

ದೇವ ನೀನು ಸುಬ್ರಹ್ಮಣ್ಯ ಹರಸಯ್ಯ

ದೇವ ಹರಸಯ್ಯಾ....

ಧಾರತೀರ್ಥದಲ್ಲಿ ಮಿಂದು 

ಉರುಳು ಸೇವೆಯನ್ನು ಮಾಡಿ

ನಿನ್ನ ಗುಡಿಯ ಮುಂದೆ ನಾವು ನಿಂತೆವಯ್ಯ

ನೀನು  ಹರಹು ದೇವಾ

ಸುಬ್ರಹ್ಮಣ್ಯ ಸುಬ್ರಹ್ಮಣ್ಯ 

ಸುಬ್ರಹ್ಮಣ್ಯ ಕುಕ್ಕೆ ಸುಬ್ರಹ್ಮಣ್ಯ  ||ಸುಬ್ರಹ್ಮಣ್ಯ||

                       

ತಾರಕನ ಕೊಲ್ಲಲೆಂದು ಕೈಲಾಸದಿ

ಇಳಿದು ಬಂದು  ಕುಕ್ಕೆ ಕ್ಷೇತ್ರದಲ್ಲಿ 

ನಿಂತ ಕಾರ್ತಿಕೇಯ ನೀನು ಗಾಂಗೇಯ ||ತಾರಕನ||                        

ದೂರ ದೂರಿನಿಂದ ಬಂದ ಭಕ್ತರೆಲ್ಲ

ನಿನ್ನ ಗುಡಿ ಸುತ್ತಿ ಸುತ್ತಿ 

ನಿನ್ನ ನಾಮ ಜಪಿಸುತಿಹರು

ಮಂತ್ರ ಪಠಿಸುತಿಹರು

ಲಕ್ಷ ಲಕ್ಷ  ದೀಪ ಹಚ್ಚಿ ನಿನ್ನ ಸೇವೆ ಮಾಡಲೆಂದು

ಗುಡಿಯ ಮುಂದೆ ನಿಂತಿಹರು ಸ್ಕಂದ ಸ್ವಾಮಿ 

ಕುಕ್ಕೆ ಸುಬ್ರಹ್ಮಣ್ಯ 


ಕಷ್ಟನಷ್ಟ ದೋಷ ಕಳೆದು

ಮುಕ್ತಿಯನ್ನು ಬೇಡಲೆಂದು

ನಿನ್ನ ಮುಂದೆ ನಿಂತಿಹರು ಎದ್ದು ಬಾರೋ

ಸುಬ್ರಹ್ಮಣ್ಯ ಸ್ವಾಮೀ

ಸುಬ್ರಹ್ಮಣ್ಯ ಸುಬ್ರಹ್ಮಣ್ಯ 

ಸುಬ್ರಹ್ಮಣ್ಯ ಕುಕ್ಕೆ ಸುಬ್ರಹ್ಮಣ್ಯ||ಸುಬ್ರಹ್ಮಣ್ಯ||

                       

ಪ್ರಾರ್ಥನೆಯ ಮಾಡುತಲಿ

ಹರಕೆಯನ್ನು ಹೊತ್ತುಕೊಂಡು

ಯಾತ್ರೆ ಮಾಡಿ ನಿನ್ನ ಬಳಿಗೆ ಬಂದೆವಯ್ಯ

ಸ್ವಾಮಿ  ಸುಬ್ರಹ್ಮಣ್ಯಾ||ಪ್ರಾರ್ಥನೆಯ||

ಧಾರ ತೀರ್ಥದಲ್ಲಿ ಮಿಂದು 

ಮಡಿಯವಸ್ತ್ರವನ್ನು ಉಟ್ಟು

ಉರುಳು ಸೇವೆಗೈದು ಬಳಿಗೆ ಬಂದೆವಯ್ಯಾ

ನಾವು ಬಂದೆವಯ್ಯಾ


ನಾಗದೋಷವನ್ನು ಕಳೆದು

ಮುಕ್ತಿಯನ್ನು ಪಡೆಯಲೆಂದು

ನಿನ್ನ ಬಳಿಗೆ ಬಂದೆವಯ್ಯಾ ನಾಗರಾಜ

ಕುಕ್ಕೆ ಸುಬ್ರಹ್ಮಣ್ಯ 

ಕಾರ್ತಿಕೇಯ ಸ್ಕಂದ ಸ್ವಾಮೀ...||೨||

ಅನಂತಾದಿ ನಾಮಗಳ 

ಭಕ್ತರಿಂದ  ಪೂಜೆ ಪಡೆವ ಸುಬ್ರಹ್ಮಣ್ಯ 

ಕುಕ್ಕೆ ಸುಬ್ರಹ್ಮಣ್ಯಾ..

ಸುಬ್ರಹ್ಮಣ್ಯ ಸುಬ್ರಹ್ಮಣ್ಯ 

ಸುಬ್ರಹ್ಮಣ್ಯ ಕುಕ್ಕೆ ಸುಬ್ರಹ್ಮಣ್ಯ ||ಸುಬ್ರಹ್ಮಣ್ಯ||

  ||ಹುತ್ತದಿಂದ||

ಓಂ ನಮೋ ಭಗವತೇ ವಾಸುದೇವಾಯ

💚🙏ಕೃಷ್ಣ...ಕೃಷ್ಣ...ಕೃಷ್ಣ🙏💚

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು