|| ರಾಘವೇಂದ್ರ ಸ್ತುತಿ ||
ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆ ||ಕೋರಿ||
ಬಾರೋ ಮಹಾಪ್ರಭುವೆ
ಚಾರು ಚರಣ ಯುಗ ಸಾರಿ
ನಮಿಪೆ ಬೇಗ ||ಚಾರು||
ಬಾರೋ ಹೃದಯ
ಸುಖ ಸಾರ ರೂಪವ ತೋರೋ ||ಬಾರೋ||
||ಕೋರಿ||
ಎಲ್ಲಿ ನೋಡಲು ಹರಿ ಅಲ್ಲಿ
ಕಾಣುವನೆಂದು || ಎಲ್ಲಿ||
ಕ್ಷುಲ್ಲಕಂಬವನೊಡೆದು
ನಿಲ್ಲದೆ ನರಹರಿ ಚೆಲ್ವಿಕೆ ತೋರಿದ ||2||
ಫುಲ್ಲ ಲೋಚನ ಶಿಶು ಪ್ರಹಲ್ಲಾದನಾಗಿ ಬಾರೋ||ಕೋರಿ||
ದೋಷ ಕಳೆದು ಸಿಂಹಾಸನವೇರಿದ||2||
ದಾಸಕುಲವ ಪೊರೆದಾ
ಶ್ರೀಶನರ್ಚಕನಾಗಿ ಪೋಷಿಸಿ ಹರಿ ಮತ||2||
ವ್ಯಾಸತ್ರಯವಗೈದು ವೇಷ ತಳೆದು ಬಾರೋ||ಕೋರಿ||
ಮೂರ್ಜಗ ಮಾನಿತ ತೇಜೋ ವಿರಾಜಿತ||2||
ಮಾಜದ ಮಹಾಮಹಿಮಾ
ಓಜಗೊಳಿಸಿ ಮತಿ ರಾಜೀವ ಬೋಧದಿ ||2||
ಪೂಜೆಗೆಂದು ಗುರು ರಾಜಾ ರೂಪದಿ ಬಾರೋ ||ಕೋರಿ||
ಮಂತ್ರ ಸದನದೊಳು ಸಂತ ಸುಜನರಿಗೆ ||2||
ಸಂತೋಷ ಸಿರಿಗರೆದು
ಕಂತು ಪಿತನ ಪಾದ ಸಂತತ ಸೇವಿಪ ||2||
ಶಾಂತ ಮೂರುತಿ ಎನ್ನಂತರಂಗದಿ ಬಾರೋ ||ಕೋರಿ||
ಈ ಸಮಯದಿ ಎನ್ನಾಸೆ ನಿನ್ನೊಳು ಬಲು ||2||
ಸೂಸಿ ಹರಿಯುತಿಹುದೋ
ಕೂಸಿಗೆ ಜನನಿ ನಿರಾಶೆಗೊಳಿಸುವಳೆ ||2||
ದೋಷ ಕಳೆದು ವಿಠಲೇಶ ಹೃದಯ ಬಾರೋ ||ಕೋರಿ||
0 ಕಾಮೆಂಟ್‌ಗಳು