ಕಂಡೆ ಕಂಡೆನು ಕೃಷ್ಣ ನಿನ್ನಯ - Kande Kandenu Krishna Ninnaya

|| ಕೃಷ್ಣ ಸ್ತುತಿ ||




ಕಂಡೆ ಕಂಡೆನು ಕೃಷ್ಣ ನಿನ್ನಯ

ದಿವ್ಯ ಮಂಗಳ ವಿಗ್ರಹ 

ಕಂಡು ಬದುಕಿದೆ ಇಂದು ನಾನು

ಕರುಣಿಸೋ ಎನ್ನೊಡೆಯನೇ  ||ಪ ||



ಉಟ್ಟ ದಟ್ಟಿಯು ಪಿಡಿದ ವಂಕಿಯು

ತೊಟ್ಟ ಕೌಸ್ತುಭ ಭೂಷಣ

ಮೆಟ್ಟಿದ ನವರತ್ನದ್ಹಾವಿಗೆ

ಇಟ್ಟ ಕಸ್ತೂರಿ ತಿಲಕವ  ||೧||


ಮಂದಹಾಸವು ದಂತ ಪಂಕ್ತಿಯು

ಉಂದದಾ ಕಡೆಗಣ್ಣ ನೋಟವು

ಅಂದವಾದ ಕುರುಳುಗೂದಲು

ಮುದ್ದು ಸುಲವೋ ಮುಖವ ನಾ  ||ಪ ||


ಎನ್ನ ಬಂಧನ ತರಿಸಿದನೆ

ಎನ್ನ ಪಾಪವ ಓಡಿತು

ಅನ್ಯ ದೈವವ ಭಜಿಸಲ್ಯಾತಕೆ 

ಮನ್ನಿಸೊ ಹಯವದನನೆ ||೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು