|| ಲಕ್ಷ್ಮಿ ಸ್ತುತಿ ||
ಪಂಕಜವಾಸಿನಿ ಹರಿ ವಕ್ಷಸ್ಥಳ ನಿವಾಸಿನಿ
ಮಂಗಳ ರೂಪಿಣಿ ಜಗದಂಬೆ ||
ಸುರಗಣ ಪೂಜಿತೆ ಹರಿಯ ರಮಣಿ
ನಿತ್ಯವೂ ಕಾಯೇ ಜಗದಂಬೆ ||
ಅನುದಿನ ನಿನ್ನಯ ನಾಮವ ಜಪಿಸುತ
ಸ್ತುತಿಸುವೆ ನಿನ್ನನು ಭಕುತಿಯಲಿ ||
ಕರುಣಿಸಿ ವರಗಳ ಪೊರೆ ನೀ ಎಮ್ಮನು
ಬೇಗನೇ ಬಾರೇ ಮಹಾಲಕ್ಷ್ಮಿ||
ನಿತ್ಯವೂ ಪೂಜಿಸಿ ಹೂಗಳ ಅರ್ಪಿಸಿ
ಭಕುತಿಯಲಿ ನಿನ್ನನು ಭಜಿಸುವೆನು ||
ಅಂಬುಜ ಮುಖಿ ಪಂಕಜಲೋಚನೆ
ಕಾಯೇ ನಮ್ಮನು ಸಿರಿಲಕ್ಷ್ಮಿ ||
ನಿನ್ನಯ ನಾಮವ ಜಪಿಸುತ ಅನುದಿನ
ನನ್ನನು ನಾನೇ ಮರೆಯುವೆನು ||
ಪ್ರೇಮ ಸ್ವರೂಪಿಣಿ ವರಗಳ ಕೊಡುತ
ಪೊರೆ ನೀ ನಮ್ಮನು ವರಲಕ್ಷ್ಮಿ ||
0 ಕಾಮೆಂಟ್‌ಗಳು