ಸದ್ಗುರು ಮನೆಗೆ ಬಂದಿಹನು - Sadguru Manege Bandihanu

|| ಸದ್ಗುರು ಸ್ತುತಿ ||








ಸದ್ಗುರು ಮನೆಗೆ ಬಂದಿಹನು ಬಾ ತಂಗೀ 

ಪಾದಸೇವೆಯ ಮಾಡೀ ಆನಂದದಿಂದಿರು ತಂಗೀ ||ಪ||


ಶ್ವೇತವಸ್ತ್ರಧಾರಿಯೂ ಸಾಕ್ಷಾತ್ ರಾಮನೂ

ಮುಗುಳ್ನಗುತಲಿ ಹೊಸ್ತಿಲ ಮುಂದೆ ನಿಂತಿಹನೂ ||1||


ಶುದ್ಧಮನದಿ ಸಾಷ್ಟಾಂಗ ಪ್ರಣಾಮ ಮಾಡೀ

ಶರಣಾಗಿಹೆನೆನುತಾ ಗುರುಪಾದ ಹಿಡಿ ತಂಗೀ ||2||


ಹರಿಹರ ಬ್ರಮ್ಹನೂ ಇವನೇ ತಂಗೀ

ಶಕ್ತಿ ಸ್ವರೂಪನೂ ಜಗವಾ ಪೊರೆಯುವವನೂ ||3||


ವಾತ್ಸಲ್ಯಪೂರ್ಣನೂ ಈ ದತ್ತಾವಧೂತನೂ

ಭಕ್ತರ ಸಂಕಟ ಹರಿಸೇ ಧರೆಗಿಳಿದಿಹನೂ ||4||


ಸದ್ಗುರು ಮನೆಗೆ ಬಂದಿಹನು ಬಾ ತಂಗೀ 

ಪಾದಸೇವೆಯ ಮಾಡೀ ಆನಂದದಿಂದಿರು ತಂಗೀ ||ಪ||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು