|| ಲಕ್ಷ್ಮಿ ಆರತಿ ಹಾಡು ||
ಆದಿಲಕ್ಷ್ಮಿ ದೇವಿಗೆ ಆರತಿಯ ಎತ್ತಿರೆ
ಅರಿಶಿನ ಕುಂಕುಮ ಹಚ್ಚಿ ಹೂಮಾಲೆ ಹಾಕಿರೆ
ಧಾನ್ಯಲಕ್ಷ್ಮಿಗೆ ನೀವು ಧೂಪ ದೀಪ ಹಚ್ಚಿರೆ
ಕನಕಲಕ್ಷ್ಮಿಗೆ ನೀವು ನೈವೇದ್ಯವ ತನ್ನಿರೆ ||ಪ ||
ಬಲದ ಕಾಲು ಮುಂದೆ ಇಟ್ಟು ಹೊಸಿಲು ದಾಟಿ ಬಾರಮ್ಮ
ಭಾಗ್ಯ ತಾಯಿ ಮಾಂಗಲ್ಯ ಸೌಭಾಗ್ಯವ ನೀಡಮ್ಮ
ಹಾಲು ತುಪ್ಪ ಹೊಳೆ ಹರಿಸಿ ಹರುಷ ಸುಖವ ತಾರಮ್ಮ
ಧನ ಧಾನ್ಯವ ಕೊಟ್ಟುS ಸಂತಾನ ಕರುಣಿಸಮ್ಮ ||1||
ಕ್ಷೀರಾಬ್ಧಿ ತನಯೇ ಆನಂದನಿಲಯೆ ವಿಷ್ಣು ಪ್ರಿಯೆ ಬಾರೆ
ಕಮಲನಯನೆ ನಿಜ ಕಮಲವದನೆ ಕಮಲಾಕ್ಷವಲ್ಲಭೆ ಬಾರೆ
ಪುಷ್ಪಸುಗಂಧಿನಿ ಹರಿಣವಿಲೋಚನಿ ಕರುಣೆಯನ್ನು ತೋರೇ
ಅನಂತರೂಪಿಣಿ ಚಿರಸುಖದಾಯಿನಿ ಇಷ್ಟಾರ್ಥವನೇ ತಾರೆ ||2||
0 ಕಾಮೆಂಟ್‌ಗಳು