|| ಶ್ರೀರಾಮ ಆರತಿ ಹಾಡು ||
ಮುತ್ತಿನ ಆರತಿ ಮಾಡುವೆ ರಾಮ
ಮುಕ್ತಿಯ ಪಾಲಿಸೋ ರಾಮ
ಮಂಗಳ ಮಾನಸ ಮಂಗಳರಾಮ
ರಾಮ ಕೋದಂಡರಾಮ ||ಪ ||
ಪರಮಶ್ರೇಷ್ಠ ಏಕನಿಷ್ಠ
ರಘುನಾಯಕ ರಘುರಾಮ 2
ನಿನ್ನ ಚರಣಕೆ ಬಾಗುವೆ ನಾನು
ಲೋಕ ಪಾಲಕ ರಾಮ ||೧||
ಕೋಟಿ ಕಣ್ಣುಗಳು ಸಾಲದಯ್ಯ
ನಿನ್ನ ರೂಪವು ನೋಡಲು 2
ಒಂದೇ ನಾಲಿಗೆ ಸಾಲದಯ್ಯ
ನಿನ್ನ ನಾಮವ ಪಾಡಲು ||೨||
ಆಡಿ ಪಾಡಿ ನಲಿವೆ ತಣಿವೆ ನಿನ್ನ
ಮಂತ್ರದ ಸಾರವ ಪ್ರೇಮದಿಂದಲಿ
ಕಾಯೋ ಎಮ್ಮ ರಾಮ
ರಘುಕುಲ ಸೋಮ ||೩||
ಕಾಮಿತ ದಾಯಕ ಕರುಣಾಧಾಮ
ಕಲ್ಯಾಣ ಕೋಮಲ ರಾಮ
ರತ್ನಮಾಲೆಯ ಧರಿಸಿ ನೀನು
ಶಿಷ್ಟರ ಪೊರೆಯೋ ರಾಮ ||೪||
ಮುತ್ತಿನ ಆರತಿ ಮಾಡುವೆ ರಾಮ
ಮುಕ್ತಿಯ ಪಾಲಿಸೋ ರಾಮ
ಮಂಗಳ ಮಾನಸ ಮಂಗಳಕಾರಕ
ರಾಮ ಕೋದಂಡರಾಮ
0 ಕಾಮೆಂಟ್‌ಗಳು