ದಯಮಾಡೆ ಭ್ರಮರಾಂಬಿಕೆ - Dayamaade Bhramarambike

|| ದೇವಿ ಸ್ತುತಿ ||




ದಯಮಾಡೆ ಭ್ರಮರಾಂಬಿಕೆ||೨||

ಎದೆ ತೋಟಕೆ ಸುಮ ಪೀಠಕೆ ,ಮಾತೆ

||ದಯಮಾಡೆ||


ಅಂದುಗೆ ಘಲ್ ಘಲ್ ಎಂಬ

ಚಂದ ಪಾದವನಿಟ್ಟು ||ಅಂದುಗೆ||

ಮಂದಹಾಸವ ಬೀರಿ ನೀ ಬಾರೆ||೨||

ನಂದಿನಿ ತನಯೆ ಸುಂದರಿ ಲಲಿತೆ||೨||

ಶ್ರೀಕರಿ ಶುಭಕರಿ ದಯಾನೀ

ಭವಾನಿ ಶಿವಾನಿ ದುರ್ಗೆ  

||ದಯಮಾಡೆ ||


ರತ್ನ ಕಂಕಣ ಕಡಗ 

ಮುತ್ತಿನ ತೋಳ ಬೀಸಿ||ರತ್ನ||

ಅತ್ತಿತ್ತ ನೋಡದೆ ನೀ ಬಾರೆ||೨||

ಶಕ್ತಿ ಸ್ವರೂಪಿನಿ ಶಂಕರಿ ಗೌರಿ||೨||

ಸುಮನಸ ವಂದಿತೆ

ದಯಾನೀ ಭವಾನಿ ಶಿವಾನಿ ದುರ್ಗೆ  

 ||ದಯಮಾಡೆ||


ವಜ್ರ ಕಿರೀಠ ಕವಚ 

ಬೊಟ್ಟು ಮಾಣಿಕ್ಯ ಪದಕ||ವಜ್ರ||

ಪಟ್ಟೆ ಪೀತಾಂಬರ ಉಟ್ಟು ನೀ ಬಾರೆ||೨||

ನವಶಕ್ತಿಧಾರಿಣಿ ಹಾರವಿಭೂ‍ಷಿಣಿ||೨||

ಶ್ರೀ ಪರಮೇಶ್ವರಿ

ದಯಾನೀ ಭವಾನಿ ಶಿವಾನಿ ದುರ್ಗೆ

||ದಯಮಾಡೆ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು