ತತ್ತತ ಧಿಮಿತ ಧಿಮಿಕಿ ಎನುತ- Tattata Dhimitha Dhimiki Enutha

|| ಶ್ರೀ ಹರಿ ಸ್ತುತಿ ||




ತತ್ತತ ಧಿಮಿತ ಧಿಮಿಕಿ ಎನುತ ಹರಿಯಾಡಿದನೇ

ಚಿತ್ತಜಪಿತ ಉತ್ತಮ ಮುತ್ತಿನ ಗೊತ್ತುಗಳ್ 

ಕುತ್ತಿಗೆಯೊಳಗೆತ್ತಾಡುತ ||


ಹಾರಪದಕ ಕೇಯೂರ ಕಿರೀಟ

ಧೀರ ಭಾಪುರಿ ಯದುವೀರ ಹೊಳೆಯುತಿರೆ

ಮಾರಜನಕ ಸುಕುಮಾರ

ಸಾರ ಗುಣಸಾಂದ್ರ ಮಹಿಮ ಹರಿ ||೧||


ಕಂಕಣ ವಂಕಿಯು ಕಿಂಕಿಣಿ ರವಗಳು

ಶಂಖಚಕ್ರ ದಿವ್ಯ ಪಂಕಜಮಾಲೆಯು

ಶಂಖಧರ ಶ್ರೀ ಪುರಂದರ ವಿಠ್ಠಲ

ವೇದಾಂತವೇದ್ಯ ಶ್ರೀಕೃಷ್ಣ ||೨||






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು