ಹರಿಯೆಂದು ಮನದಲ್ಲಿ - Hariyendu Manadalli

|| ಹರಿ ಸ್ತುತಿ ||





ಹರಿಯೆಂದು ಮನದಲ್ಲಿ 

ಮರೆದೊಮ್ಮೆ ನೆನೆದರೆ ದುರಿತ 

ಪರ್ವತಗಳ ಖಂಡಿಪುದು ವಜ್ರದಂತೆ ||ಪ|| 


ಮೇರುಸುವರ್ಣ ದಾನವ ಮಾಡಲು

 ನಿತ್ಯ ನೂರು ಕನ್ಯಾದಾನವ ಮಾಡಲು 

ಧಾರಿಣಿಯೆಲ್ಲವ ಧಾರೆಯನೆರೆಯಲು 

ನಾರಾಯಣ ಸ್ಮರಣೆಗೆ ಸರಿಯಹುದೆ || 


ಹತ್ತುಲಕ್ಷ ಗೋದಾನ ಮಾಡಲು ಪುಣ್ಯ-ವ್ರತಗಳ 

ಅನುದಿನ ಆಚರಿಸಲು ಶತಕೋಟಿ 

ಯಜ್ಞವ ಮಾಡಲು ಲಕ್ಷ್ಮೀ- ಪತಿ 

ನಾಮಸ್ಮರಣೆಗೆ ಸರಿಯೆನ್ನಬಹುದೆ || 


ಗಂಗೆ ಕಾಳಿಂದಿ ಗೋದಾವರಿ ಕಾವೇರಿ 

ತುಂಗಭದ್ರೆಯಲಿ ಸ್ನಾನವ ಮಾಡಲು 

ಮಂಗಳ ಮೂರುತಿ ಪುರಂದರವಿಟ್ಠಲ 

ರಂಗನ ಸ್ಮರಣೆಗೆ ಸರಿಯೆನ್ನಬಹುದೆ ||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು