ಗೋವಿಂದ ಸ್ತುತಿ
ಕನಕನಿಗೊಲಿದ ಶ್ರೀ ಗೋವಿಂದ
ನಮ್ಮನು ಕಾಯೋ | ಮುಕುಂದಾ |
ಸಂಸಾರವೆಂಬ ಸಾಗರ ಮಥಿಸಲು
ಕಡಗೋಲು ಪಿಡಿದಿಹೆಯಾ |
ಹಗ್ಗವ ಹಿಡಿದು ಭಕ್ತರನ್ನೆಲ್ಲ
ಮುಕ್ತಿಯ ತೀರಕೆ ಒಯ್ಯುವೆಯಾ ||೧||
ಉಡುಪಿ ಕ್ಷೇತ್ರದಿ ನೆಲೆಸುತ
ನಿಂದು ಮಧ್ವವ್ಯಾಸ
ವಾದಿರಾಜರಿಗೊಲಿದು ಪುರಂದರದಾಸರ
ಹಾಡಿಗೆ ಕುಣಿದು ಮೆರೆವ ಮಾಧವ |
ಭಕ್ತರ ಬಂಧು ಪಲಿಮಾರು
ಅದಮಾರು ಕೃಷ್ಣಾಪುರ ಪುತ್ತಿಗೆ
ಶಿರೂರು ಸೋದೆ ಪೇಜಾವರ
ಕಾಣಿಯೂರಿನ ಯತಿಗಳ
ಪೂಜೆಯ ಕೈಗೊಂಡ ಶ್ರೀ ವಿಠ್ಠಲ
0 ಕಾಮೆಂಟ್‌ಗಳು