ನಾರಾಯಣ ಎನ್ನಿರೋ - Narayana Enniro



|| ನಾರಾಯಣ ಸ್ತುತಿ ||




ನಾರಾಯಣ ಎನ್ನಿರೋ, 

ಶ್ರೀ ನರಹರಿ ಪಾರಾಯಣ 

ಮಾಡಿರೋ || 


ನಾರಾಯಣನೆಂದು ಅಜಮಿಳನು ಕೈವಲ್ಯ 

ಸೇರಿದನೆಂಬೊ ಸುದ್ದಿಯ ಕೇಳಿ ಅರಿಯಿರಾ ||


ಕಾಶಿಗೆ ಹೋಗಲೇಕೆ, ಕಾವಡಿ ಪೊತ್ತು

ಬೇಸತ್ತು ತಿರುಗಲೇಕೆ

ವಾಸುದೇವನ ನಾಮ ಬಾಯ್ತುಂಬ ನೆನೆದರೆ

ಕ್ಲೇಶಗಳೆಂಬುದನು ಲೇಶ ಮಾತ್ರವಿಲ್ಲದೆ || ೧ ||


ಚೋರರ ಭಯವಿಲ್ಲವೊ, ಹರಿನಾಮಕ್ಕೆ

ಯಾರ ಅಂಕೆಯಿಲ್ಲವೊ

ಊರನಾಳುವ ದೊರೆ ನೀತಿ ಭೀತಿಗಳಿಲ್ಲ

ಘೊರಪಾತಕವೆಲ್ಲ ದೂರ ಮಾಡುವುದಿಕ್ಕೆ || ೨ ||


ಸ್ನಾನವ ಮಾಡಲೇಕೆ, ಮಾನವರಿಗೆ

ಮೌನ ಮಂತ್ರಗಳೇಕೆ

ದೀನಪಾಲಕ ನಮ್ಮ ಬೆಟ್ಟದೊಡೆಯನ

ಧ್ಯಾನಕೆ ಸರಿಯುಂಟೆ ಪುರಂದರವಿಠಲನ || ೩ ||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು