|| ಗೋವಿಂದ ಸ್ತುತಿ ||
ರಕ್ಷಿಸೋ ಗೋಪಾಲ ಬಾಲ
ರಕ್ಷಿಸೋ ಉಡುಪಿಶ್ರೀಕೃಷ್ಣ
ರಕ್ಷಿಸೊ ಶ್ರೀಶ ಶ್ರೀನಿವಾಸ
ರಕ್ಷಿಸೆನ್ನ ಪದ್ಮಾಕ್ಷ ತ್ರಿಜಗದಧ್ಯಕ್ಷ
ಖಳ ಜನಶಿಕ್ಷ ಪಾಂಡವಪಕ್ಷ
ಕರುಣ ಕಟಾಕ್ಷದಲಿ ನೀ ಸಲಹೋ||
ಕೊಂಚ ಮತಿಯಲಿಕುಜನರ ಸೇರಿ
ಸಂಚರಿಸುತಲಿ ದೀನನಾದೆ
ಪಂಚಶರಸ್ಮರ ವಂಚಿಸುತಬಿಡೆ
ಚಂಚಲಾಕ್ಷೇರ ಸಂಚುನೋಟದ
ಮಿಂಚಿಗೆನ್ನ ಮನ ಚಂಚಲಾಗುತೆ
ವಂಚಿಸೆ ಯಮನಂಚಿಗೆ ಸಿಲುಕಿದೆ ||
ಕಿಟ್ಟಗಟ್ಟಿದ ಕಬ್ಬಿಣದಂತೆ
ಕೆಟ್ಟ ಕಿಲ್ಬಿಷದ ರೂಪದಿಬಿದ್ದು
ದಿಟ್ಟ ನಿನ್ನಯ ಗುಟ್ಟು ತಿಳಿಯದೆ
ಪೊಟ್ಟೆ ಗೋಸುಗ ಕೆಟ್ಟ ಕುಜನರ
ಘಟ್ಟನಾ ಕಾಲ್ಗಟ್ಟೆ ಬಹುಶ್ರಮಪಟ್ಟು
ಭವದಿ ಕಂಗೆಟ್ಟೆ ಪ್ರತಿದಿನ ||
ಶ್ರೀ ಕಮಲೇಶಹೃತ್ಪದ್ಮದಿನೇಶ
ಪ್ರಕಾಶ ಬೇಗನೆ ತಡೆವೆನ್ನ ವಾಕ್ಕುಲಾಲಿಸಿ ಕರವ ಪಿಡಿದಾ
ಕುಚೇಲನ ಸಾಕಿದಾಪರಿ
ಎನ್ನ ಕರ ಪಿಡಿ ಜಗನ್ನಾಥ ವಿಠಲ||
0 ಕಾಮೆಂಟ್‌ಗಳು