|| ಕನಕದಾಸ ಕೃತಿ ||
ಜಪವ ಮಾಡಿದರೇನು ತಪವ ಮಾಡಿದರೇನು |
ಕಪಟ ಗುಣ ವಿಪರೀತ ಕಲುಷವಿದ್ದವರು ||ಜಪವ||
ಆದಿ ಗುರುವರ್ಯರೇ ಅತ್ತಲಿತ್ತಲು ತೊಳಲಿ |
ವೇದಶಾಸ್ತ್ರಗಳೋದಿ ಬಾಯಾರಲು |
ಆದಿಯನು ಕಾಣದಂತಿರುತಿದ್ದು ಫಲವೆಂದು |
ವಾದ ಕರ್ಮದೊಲಿದ್ದ ಭೇಧವಾದಿಗಳು ||ಜಪವ||
ನಡಿವ ಕಾಲದಿ ದಾನ ಧರ್ಮವನು ಮಾಡದೆ |
ಅಡವಿಯೊಳು ಕೆರೆ ತುಂಬಿ ಬತ್ತಿದಂತೆ |
ಮಡದಿ ಮಕ್ಕಳಿಗಿಂದು ಒಡವೆಗಳ ಗಳಿಸಿಟ್ಟು |
ತಿಳಿಯಲಾ ಯಮನವರ ಕಟ್ಟಿಗೊಳಗಾಗಿ ||ಜಪವ||
ಚಳಿಮಳಿ ಅತಿಕಾರ್ಗತ್ತಲೆಯೊಳಗಿದ್ದು |
ಇಳಿಮುಳುಗಿ ನದಿಯೊಳಗೆ ತಪವ ಮಾಡಿ |
ಕಳವಳಿಸಿ ನೂರೆಂಟು ತೊಳಲಿ ಬೀಳದೆ ಬೇಗ |
ನಳಿನಾಕ್ಷ ಆದಿಕೇಶವ ನೆನೆಮನವೆ ||ಜಪವ||
0 ಕಾಮೆಂಟ್‌ಗಳು