||ಪುರಂದರ ದಾಸರ ದೇವರನಾಮ||
ಪೂಜೆ ಯಾತಕೋ, ಮನುಜ
ಪೂಜೆ ಯಾತಕೋ ||ಪ |
ಪೂಜೆಯಲಿ ನಿನ್ನ ಮನ
ನಿಲ್ಲದಿದ್ದ ಮೇಲೆ ನಿನಗೆ ||ಅ ||
ಭೂತದಯಾ ಪಶ್ಚಾತ್ತಾಪ ನೀತಿಯೆಂಬುದು
ಮತ್ತಿಲ್ಲ ಮಾತಿನಲಿ ಜ್ಞಾನಿಯಲ್ಲ
ಕೋತಿ ಬುದ್ಧಿ ಬಿಡಲಿಲ್ಲ ||
ಹಾಕುವುದು ಸಾಧುವೇಷ ಸಾಕುವುದು
ಹಲವು ದೋಷ ಬೇಕೇ ನಿನಗೆ
ಒಳ್ಳೆ ಪದ ಏಕೆ ಭ್ರಾಂತಿ ಉನ್ಮತ್ತ ||
ಪೂಜೆಯಲ್ಲಿ ಹೊಲೆಯನಿಸಿ
ಜಾಜಿ ತುಳಸಿ ಕೈಯಲಿ
ಮೂರ್ಜಗದೊಡೆಯ ಅವನು ಎಲ್ಲಿ
ಮಾರ್ಜಾಲನಂತೆ ನೋಡದಲಿ ||
ಆಸೆಯನು ಬಿಡಲಿಲ್ಲ ಶೇಷಶಯನನ
ಪೂಜೆಯೆಲ್ಲ ಗಾಸಿಬಟ್ಟು ಮಾಡುತಿಯಲ್ಲ
ಮೋಸ ಹೋಗದೆ ತಿಳಿಯೊ ಎಲ್ಲ ||
ತಂದೆ ಪುರಂದರವಿಠಲನ
ಒಂದೆ ಮನದಿ ನೆನೆ ಅಣ್ಣಯ್ಯ
ಎಂದು ಕುಂದದ ಪದವನೀವ
ನಂದ ನಂದನ ತಂದೆ ಕೃಷ್ಣ ||
0 ಕಾಮೆಂಟ್‌ಗಳು