ಒಪ್ಪಿತೋ ಹರೀ ನಿಮ್ಮ ಚಲ್ವಿಕೇ - Oppito Hari Nimma Chelvike

|| ಹರಿ ಸ್ತುತಿ ||




ಒಪ್ಪಿತೋ ಹರೀ ನಿಮ್ಮ ಚಲ್ವಿಕೇ |

ಹಚ್ಚಿ ಗೋಕುಲ ಕೃಷ್ಣ ಇಂದಿರಾನೆ ||


ರಮಣನಾಥನೇ ಮಲಯದಾಯಕಾ |

ಶ್ರಮ ಕೊಡುವುದೋ ಅಲ್ಲವೊ ಧರ ||1||


ಯಮನೆಯಾರುಷಾ ಸರ್ವದಾ ಭಯಾ |

ವೃಷಭನಾಭಯಾ ರಾಕ್ಷಸಾಭಯ ||2||


ಏಳು ದಿವಸದಾ ಮಳೆಗಳಾಭಯಾ |

ಗೆದ್ದೆವೋ ಹರಿ ನಿಮ್ಮ ಪರಿಯಲಿ || 3||


ದರ್ಶನ ಮಾತ್ರದೀ ಪಾಪನಾಶನಾ |

ಪದ್ಯಜಾಕ್ಷಿತೋ ಧರಣಿ ಮಂಡಲ || 4||


ಅತ್ತೆ ಮಾವನಾ ಮಾತು ಕೇಳದೇ |

ಚಿತ್ತ ಭ್ರಮೆಯಲಿ ಇತ್ತ ಬಂದವೂ || 5 ||


ಬಂದೆವಲ್ಲದೇ ಕೃಷ್ಣವಿರಹದೀ |

ಮಂದಮಾರುತ ಗಾಳಿ ಬೀಸಲು || 6 ||


ಕೃಷ್ಣ ಬಂದನೇ ಫಲವ ತಂದನೇ |

ಸಖಿಯರೆಲ್ಲರೂ ಸಂತುಷ್ಟಿ ಪಟ್ಟರು || 7 ||


ಪೀತಾಂಬ್ರಧಾರಿಯಾ ದಿವ್ಯ ಮಾಲಿಕೇ |

ಕೃಷ್ಣರಾಜರಾ ಕೊರಳಿಗ್ಹಾಕಲು || 8 ||


ಇದು ಭಾಗವತ ವೆನ್ನಿ |

ಇದು ಗೋಪಿಕಾ ಗೀತಾ || 9 ||


ಇದು ಹೇಳಿ ಕೇಳಿದ ಸಜ್ಜನರಿಗೆ |

ಹಯವದನನು ಮುಕ್ತಿಕೊಡುವನು ||10 ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು