|| ಹರಿ ಸ್ತುತಿ ||
ಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯ ||
ನೀ ಎಲ್ಯಾಡಿ ಬಂದ್ಯೋ ಎನ್ನ ಕೃಷ್ಣಯ್ಯ ||
ಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯ
ನೀ ಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯ
ಆಲಯದೊಳಗೆ ನೀನಾಡದೆ
ಚಿನಿ ಹಾಲು ಸಕ್ಕರೆ ನೀನೊಲ್ಲದೆ ||
ಬಾಲೆಯಾರೊಡನೆ ಕೂಡ್ಯಾಡದೆ ||
ಮುದ್ದು ಬಾಲೆಯೆ ನೀ ಎನ್ನ ಕಣ್ಣಾ ಮುಂದಾಡದೆ||1||
ಬಟ್ಟ ಮುತ್ತಿನ ಬೊಗಸೆ ಕಂಗಳು
ಹಣೆಯೊಲಿಟ್ಟ ಕಸ್ತೂರಿ ತಿಲಕದಂದವು ||
ದಿಟ್ಟತನದಲಿ ಕೂಡ್ಯಾಡಲು ||
ಪುಟ್ಟ ಕ್ರಷ್ಣಯ್ಯ ನೀನೆನ್ನ ಕಣ್ಣ ಮುಂದಾಡದೆ || 2 ||
ಅಷ್ಟ ದಿಕ್ಕಿಲಿ ಅರಸಿ ಕಾಣದೆ
ಬಹಳ ದ್ರಿಷ್ಟಿ ಕೆಟ್ಟೆನೊ ನಿನ್ನ ನೋಡದೆ ||
ಎಷ್ಟು ಹೇಳಲಿ ಕೇಳ ಬಾರದೆ |
ರಂಗ ವಿಠಲ ನೀನೆನ್ನ ಕಣ್ಣ ಮುಂದಾಡದೆ || 3 ||
0 ಕಾಮೆಂಟ್‌ಗಳು