||ಮಾರುತಿ ಭಜನೆ ||
ಪ್ರಾಣ ಬಾರೋ ಜಗತ್ರಾಣ ಬಾರೋ |
ಪ್ರಾಣಿ ಸಕಲ ಕರ್ಮ ಮಾಳ್ಪ ಜಾಣ ಬಾರೋ ॥
ಪಂಚರೂಪದಿ ಪ್ರಪಂಚ ವ್ಯಾಪ್ತ ಬಾರೋ
ಹಂಚಿ ಕೇಳಿ ದೈತೆಯರ ವಂಚಕನೆ ಬಾರೋ || ಪ್ರಾಣ||
ವಾಯುಪಸ್ಥ ಕರ್ಮಗೈವ ಅಪಾನ ಬಾರೋ |
ವಾಯುವ ನೀ ನಿರೋಧೀಶೆ ಕಾಯ್ವರಾರೋ ||
ಗೋಣು ಮುರಿವ ಭಾರ ಹೊರುವ ವ್ಯಾನ ಬಾರೋ |
ಪ್ರಾಣ ಪಂಚ ವ್ಯೂಹ ಮುಖ್ಯ ವ್ಯಾನ ಬಾರೋ |ಪ್ರಾಣ||
ಉದಕ ಅನ್ನಕಾವಕಾಶುದಾನ ಬಾರೋ |
ಮುದದಿ ಶ್ವಾಸ ಮಂತ್ರ ಜಪ ಜಾಣ ಬಾರೋ ||
ವೈದಿಕ ಲೌಕಿಕ ಶಬ್ಧ ಸುಡಿಸೆ ಬಾರೋ ||೨||
ಊರ್ದ್ವಗತಿ ದಾತನೆ ಉದಾನ ಬಾರೋ || ಪ್ರಾಣ||
ಪಾನ ಅನ್ನಂಗಳ್ದಂಚೆ ಸಮಾನ ಬಾರೋ |
ಧ್ಯಾನವಿಂತು ಈವ ಮುಖ್ಯಪ್ರಾಣ ಬಾರೋ ||
ಕರುಣಾಸಾಗರ ದೇಹವೀಣೆ ಚರಿಸೆ ಬಾರೋ…ದೇವಾ…
ಮುಖ್ಯಪ್ರಾಣಾ…. ಮುಖ್ಯಪ್ರಾಣ |
ಗುರುಗೋವಿಂದವಿಠ್ಠಲಾ ದೀಷ್ಟಿತ
ಗುರುವೇ ಬಾರೋ ||ಪ್ರಾಣ||
0 ಕಾಮೆಂಟ್‌ಗಳು