ಮನುಜ ಶರೀರವಿದೇನು ಸುಖ - Manuja Shareeravidenu Sukha

|| ಪುರಂದರದಾಸರ ತತ್ವಪದ ||





ಮನುಜ ಶರೀರವಿದೇನು ಸುಖ ಇದ

ನೆನೆದರೆ ಘೋರವಿದೇನು ಸುಖ ||


ಜನನ ಮರಣ ಮಲದ ಕೂಪದಲ್ಲಿದ್ದು

ಅನುಭವಿಸುವುದು ಇದೇನು ಸುಖ

ತನುವಿದ್ದಾಗಲೆ ಹೃದಯದ ಶೌಚದ

ಸ್ತನಗಳ ನುಂಬುವುದೇನು ಸುಖ ||


ದಿನ ದಿನ ಹಸಿವು ತೃಷೆ ಘನ ಘನ ರೋಗದೊ-

ಳನುಭವಿಸುವುದೇನು ಸುಖ

ನೆನೆಯಲನಿತ್ಯ ನೀರ್ಗುಳ್ಳೆಯಂತಿರುತಿಪ್ಪ

ತನು ಮಲ ಭಾಂಡವಿದೇನು ಸುಖ ||


ಪರಿ ಪರಿ ವಿಧದಲಿ ಪಾಪವ ಗಳಿಸುತ

ನರಕಕೆ ಬೀಳುವದೇನು ಸುಖ

ಪುರಂದರವಿಠಲನ ಮನದಿ ನೆನೆದು ಸ-

ದ್ಧರ್ಮದಿ ನಡೆದರೆ ಆಗ ಸುಖ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು