ನಮೋ ಪಾರ್ವತಿ ಪತಿನುತ ಜನಪರ - Namo Parvathi Pathinuta Janapara

|| ಶಿವ ಭಜನೆ ||




ನಮಃ  ಪಾರ್ವತಿ ಪತಿನುತ ಜನಪರ

ನಮೋ ವಿರೂಪಾಕ್ಷ ||ಪ||

ರಮಾರಮಣನಲ್ಲಮಲ ಭಕುತಿ ಕೊಡು

ನಮೋ ವಿಶಾಲಾಕ್ಷ ||ಅಪ||



ನೀಲಕಂಠ ತ್ರಿಶೂಲ ಢಮರು ಹಸ್ತಾಲಂಕೃತ ರಕ್ಷಾ |

ಫಾಲನೇತ್ರ ಕಪಾಲ ರುಂಡಮಣಿ ಮಾಲಾದೃತ ವಕ್ಷಾ |

ಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷ |

ಶ್ರೀಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ ||೧||



ವಾಸವನುತ ಹರಿದಾಸ ಈಶ ಕೈಲಾಸವಾಸ ದೇವ |

ದಾಶರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವ

ಭಾಷಿಸುತಿಹೆ ಅಸತ್ವ ಜೀವರಿಗೆ ಈಶನೆಂಬ ಭಾವ |

ಶ್ರೀಶನಲ್ಲಿ ಕೀಲಿಸು ಮನವ ಗಿರಿಜೇಶ ಮಹಾದೇವ ||೨||



ಮೃತ್ಯುಂಜಯ ನಿನ್ನುತ್ತಮ ಪದಯುಗ ನೃತ್ಯನೋ ಸರ್ವತ್ರ |

ಹತ್ತಿರ ಕರೆದು ಅಪತ್ಯನಂತೆ ಪೊರೆಯುತ್ತಿರೋ ತ್ರಿನೇತ್ರ ||

ತೆತ್ತಿಗನಂತೆ ಕಾಯುತ್ತಿಹೆ ಬಾಣದ ಸತ್ಯದಿ ಸುಚರಿತ್ರ |

ಕರ್ತೃ ಉಡುಪಿ ಸರ್ವೋತ್ತಮ ಶ್ರೀ ಕೃಷ್ಣನ ಪೌತ್ರ ಕೃಪಾಪಾತ್ರ ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು