ಅರಸಿನಂತೆ ಬಂಟನೋ ಹನುಮಂತರಾಯ - Arasinanthe Bantano Hanumantharaya

|| ಹನುಮ ಭಜನೆ ||




ಅರಸಿನಂತೆ ಬಂಟನೋ ಹನುಮಂತರಾಯ ||

ದೊರೆಯಂತೆ ಸೇವಕನೋ ||


ಅರಸಿನಂತೆ ಬಂಟನೆಂಬುದು ನಿನ್ನೊಳು |

ಕುರುಹು ತೋರಿತು ಮೂರು ಲೋಕಕೆ ಹನುಮ ||


ಒಡೆಯನಂಬುಧಿಯೊಳು ಪೊಕ್ಕು ವೇದವ ತಂದು |

ತಡೆಯದೆ ಅಜಗಿತ್ತನೆಂದೆನುತ ||

ಸಡಗರದಿಂದ ಶರಧಿಯ ದಾಟಿ ಪೆರ್ಮುಡಿಯ

ಮಾಣಿಕವ ರಾಘವಗಿತ್ತೆ ಹನುಮ ||1||


ಮಂದರಧರ ಗೋವರ್ಧನ ಗಿರಿಯನು

ಲೀಲೆಯಿಂದಲಿ ನಿಂದು ನೆಗಹಿದನೆನುತ |

ಸಿಂಧು ಬಂಧನಕೆ ಸಮಸ್ತ ಪರ್ವತಗಳ

ತಂದು ನಳನ ಕೈಯೊಳಗಿತ್ತೆ ಹನುಮ ||2||


ಸಿರಿಧರ ವರ ಕಾಗಿನೆಲೆಯಾದಿಕೇಶವರಾಯನು |

ಸುರರಿಗಮೃತವನು ಎರೆದನೆನುತ ||

ಮೆರೆವ ಗಿರಿಯ ವಾಸ ಕಪಿಕೂಲ ಸೌಮಿತ್ರಿ |

ಗೆರೆದು ಶ್ರೀರಾಮನ ನಿಜದೂತನೆನಿಸಿದೆ ಹನುಮ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು