ಕಮಲೆ ನಿನ್ನನು ಭಜಿಪೆ - Kamale Ninnanu Bhajipe

 || ಮಹಾಲಕುಮಿ ಭಜನೆ ||






ಕಮಲೆ ನಿನ್ನನು ಭಜಿಪೆ ಕಮನೀಯ ಗಾತ್ರೆ

ಸುಮನಸರ ಜನನಿ ನಿನ್ನ ಅಮಲಪದ ತೋರೆ||ಪ||


ಲೋಕಸುಂದರಿ ಎನ್ನ ಶೋಕಗಳ ತರಿದು ಅವ

ಲೋಕಿಸೆ ಕರುಣಮಯ ದೃಷ್ಟಿಯಿಂದ

ಏಕಮನಸು ನೀಡೆ ಶ್ರೀ ಕಳತ್ರನ ಪದದಿ

ನೀ ಕರುಣಿಸಿದನೆ ನನಗನೇಕ ಜನ್ಮದಲಿ || 1 ||


ಇಂದಿರೆ ನಿನ್ನ ಪತಿ ಸಂದರುಶನವನೆನಗೆ

ಎಂದೆಂದಿಗೆ ತೊಲಗದಂದದಲಿ ನೀಡೆ

ಒಂದನರಿಯೆನೆ ಈಗ ಬಂದೆನೇ ನಿನ್ನ ಬಳಿಗೆ

ನಂದಕಂದನ ತೋರಿ ಕುಂದು ಪರಿಹರಿಸೆ || 2 ||


ಗೋಪಾಲಕೃಷ್ಣವಿಠ್ಠಲನ ಹೃದಯದಿ ತೋರಿ

ಕಾಪಾಡೆ ಸತತದಲಿ ಕಾರುಣ್ಯಶಾಲಿ

ನೀ ಪಯೋಬ್ಧಿಯೊಳ್ ಕೈಪಿಡಿದೆ ಶ್ರೀ ಹರಿಯ

ರೂಪ ರೂಪಾಂತರದ ವ್ಯಾಪಾರ ತಿಳಿಸೆ |



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು