ಇಟ್ಟಿಗೆ ಮೇಲೆ ನಿಂತನಮ್ಮ ವಿಠಲ ತಾನು - Ittige Mele Nintha Namma Vittala Tanu

|| ಪಾಂಡುರಂಗ ವಿಠಲ ಭಜನೆ ||




ಇಟ್ಟಿಗೆ ಮೇಲೆ ನಿಂತನಮ್ಮ ವಿಠಲ ತಾನು

ಪುಟ್ಟಪಾದ ಊರಿ ನಿಂತ ದಿಟ್ಟ ತಾನು || ಪ ||


ಪುಟ್ಟ ಪಾದ ಊರಿ ನಿಂತ ಗಟ್ಟಿಯಾಗಿ ನಿಂತನಮ್ಮ

ಟೊಂಕದ ಮೇಲೆ ಕೈಯ ಕಟ್ಟಿ

ಭಕ್ತರು ಬರುವುದ ನೋಡುವನಮ್ಮ ||ಅಪ||


ಪಂಢರ ಪುರದಲಿ ಇರುವನಂತೆ

ಪಾಂಡುರಂಗ ಎಂಬುವನಂತೆ

ಚಂದ್ರಭಾಗ ಪಿತ ಇವನಂತೆ

ಅರಸಿ ರುಕ್ಕಿಣೀ ಪತಿ ಇವನಂತೆ || ೧||


ಕನಕದಾಸೆ ಇವಗಿಲ್ಲವಮ್ಮ

ಹಣದ ಆಸೆ ಬೇಕಿಲ್ಲವಮ್ಮ

ನಾದಬ್ರಹ್ಮ ಎಂಬುವನಮ್ಮ

ಭಕುತರ ವಚನಕೆ ಕಾದಿಹನಮ್ಮ ।| ೨ ।|


ಕರಿಯ ಕಂಬಳಿ ಹೊದ್ದಿಹನಮ್ಮ

ಹಣೆಗೆ ನಾಮ ಹಚ್ಚಿಹನಮ್ಮ

ತುಳಸಿ ಮಾಲೆ ಹಾಕ್ಯಾನಮ್ಮ

ಪುರಂದರ ವಿಠಲ ಒಲಿದನಮ್ಮ ।| ೩ |।




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು