ವೇಂಕಟಾಚಲ ಎಂದೊಮ್ಮೆ ಜಪಿಸು - Venkatachala Endomme Japisu

|| ವೇಂಕಟಾಚಲ_ಪಂಚಮಿ ||

ರಚನೆ : ಅಂಬಾಸುತ



ವೇಂಕಟಾಚಲ ಎಂದೊಮ್ಮೆ ಜಪಿಸು ನಿತ್ಯದೊಳು ನೀ...

ವೇಂಕಟಾಚಲ ಎಂದೊಮ್ಮೆ ಜಪಿಸು...||ಪ||

ಸಂಕಟವಿಲ್ಲದ ನಿತ್ಯ ನಿನಗಾವುದು

ನಿರ್ಮಲ ಚಿತ್ತದಿ ನಿರುತವೂ ನೀ ||ಅ.ಪ||


ವೈರುಧ್ಯವಿಲ್ಲದ ಭಾವ ನಿನಗಾವುದು

ವಿವೇಕತನ ಆ ನಾಮದಿಂದಲೆ ಬಹುದು ||೧||


ಹಾದಿಯ ಕಲ್ಲು ಮುಳ್ಳುಗಳೆಲ್ಲಾ ಸವೆದಾವು

ಜ್ಞಾನ ಮಂದಿರಕೆ ನಿನ್ನ ಕರೆದೂ ಒಯ್ದಾವು...||೨||


ಆನಂದ ತಾನಾಗೇ ನಿನ್ನ ಮನ ಸೇರ್ವುದು

ಮನವು ಅವನಡಿಯೊಳು ಹೊರಳಾಡುವುದು... ||೩||


ಸಖರಾಯಪುರದ ಆತ್ಮಸಖನ ಪರಮ

ಅಂಬಾಸುತನ ಪಂಚಪ್ರಾಣವೆನಿಸಿದ ದಿವ್ಯ...||೪||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು