ಫಲವನ್ನೀಯೋ ಗುರುನಾಥನೇ - Phalavanneeyo Gurunathane

|| ವೇಂಕಟಾಚಲ_ಪಂಚಮಿ ||

ರಚನೆ : ಅಂಬಾಸುತ


ಫಲವನ್ನೀಯೋ ಗುರುನಾಥನೇ

ಪರಮಾತ್ಮನು ನೀನೆಂದು ಕೈಚಾಚಿಹೆನೈ...||ಪ||


ನಿನ್ ಹೊರತು ಮಿಕ್ಕಾರ ಬಳಿ ನಾ ಬೇಡಲೊ

ನಿನ್ ಹೊರತು ಫಲವನ್ನು ಎನಗಾರೀವರೋ...||೧||


ಸೇವೆಗೆ ಪ್ರತಿಫಲ ಕೊಡು ಎಂದು ನಾ ಬೇಡೆನೊ

ಸೇವಿಸುವೆನು ನಿತ್ಯ ಸಾವಾಗೊ ತನಕವೂ....||೨||


ಮಾಗಿದ ಕೊಳೆಯದ ಮುದದಿ ರಸಪೂರಿತ

ಮಂಗಳಕರನ ಕರ ಸೋಕಿದ ಸ್ವಾಧಿಷ್ಟ...||೩||


ಸುಖಪುರದೊಡೆಯ ಗುರುನಾಥ ಅವಧೂತ...

ಅಂಬಾಸುತನಿಗೆ ನಿನ್ನ ಕರುಣೆಯೆಂಬುವ ಪೂರ್ಣ...||೪||


#

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು