ಜಯ ಜಯ ಜಗಜ್ಜನನಿ ಭವಾನಿ - Jaya Jaya Jagajjanani Bhavani

|| ದೇವಿ ಸ್ತುತಿ ||





ಜಯ ಜಯ ಜಗಜ್ಜನನಿ ಭವಾನಿ

ಜಯಜಯ ಜಗಜ್ಜನನಿ ಭವಾನಿ

ನಮಿಸುವೆ ಶಿವ ರಮಣಿ ದೇವಿ

ಜಯ ಜಯ ಸುರವರ ಮುನಿವರದಾಯಿನಿ

ಜಯ ಮಹಿಷಾಸುರ ಮರ್ದಿನಿಯೇ||ಪ||


ಅಷ್ಟ ಶಕ್ತಿ ಸಹಚಾರಿಣಿ ಮಾತೆ|ಕಷ್ಟವ ನೀಗಿಸುತೆ

ಶಿಷ್ಟರ ರಕ್ಷಿಸಿ ದುಷ್ಟರ ಶೀಕ್ಷಿಸಿ

ಅಷ್ಟ ಸೌಭಾಗ್ಯವ ನೀಡುವ ದೇವತೆ||೧||


ತುಂಗಭದ್ರ ತಟ ವಾಸಿನಿಯೇ।ಭಂಗಕುಂತಳೆ ತಾಯೆ

ಮಂಗಳಕಾರಿಣೀ ಜಗದೋದ್ಧಾರಿಣಿ|ಭಗವತಿ ಭಯ

ಸಂಹಾರಿಣಿ ಮಾಯೆ||೨||


ನಿತ್ಯ ನಿರ್ಮಲ ನಿರಾಕಾರೆ|ನಿತ್ಯ ಶುದ್ಧ ನಿರಂತರೆ

ಮಿಥ್ಯ ವಿಮೋಚಿನಿ ಸತ್ಯ ಪರಾಯಿಣಿ|

ನಿತ್ಯದಿ ಭಜಿಪರ ಪೊರೆಯುವ ಧೀರೆ||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು