|| ಲಕ್ಷ್ಮಿ ಆರತಿ ಹಾಡು ||
ಪಚ್ಚದಲಿ ಸಾರಿಸಿ ಹವಳದಲಿ ಗುಡಿಕಟ್ಟಿ
ಅಚ್ಚ ಮುತ್ತಿನ ರಂಗವಲ್ಲಿಯನಿಟ್ಟು|
ಅಚ್ಯುತನ ರಾಣಿ ಮಹಲಕ್ಷ್ಮೀ ಬರುತಾಳೆ ಎಂದು
ಕಟ್ಟಿದರು ಮಕರ ತೋರಣಗಳ||ಪ||
ಶ್ರಾವಣ ಮಾಸವು ಮೊದಲ ಶುಕ್ರವಾರ
ಭೋರೆಂಬ ಪಂಚ ವಾದ್ಯ ಸಹಿತ
ತಾರಾ ಚಂದ್ರ ಬಲವು ರೋಹಿಣಿ ನಕ್ಷತ್ರ ಸಹಿತಾಗಿ
ತಾ ಒಲಿದು ಬಂದಳು ಮಹಲಕ್ಷ್ಮೀ ||೧||
ಮೂರು ಮೂರು ಸಂಜೆ ಮುಡಿಯನಿಟ್ಟುಕೊಂಡು
ಮುಡಿದ ಮಲ್ಲಿಗೆ ಹೂವು ಉದುರಿಸುತ್ತಾ
ದೂರೆ ರಾಯರ ಯಾವುದು ಎನುತಲಿ
ಬಂದಳು ಮಹಲಕ್ಷ್ಮೀ ನಮ್ಮ ಮನೆಗೆ||2||
ಬಾಗೀಲಾಗಿನ ಕೂಸು ಬಾಗಿಲಾಗಿರಲಿಕ್ಕೆ
ಬಾಳೆಹಣ್ಣನೆ ಕೈಯಲಿ ಕೊಟ್ಟು
ಮೇಲಲೆ ನೂರುವರುಷ ಹೆಚ್ಚಾಗಿ
ಬಾಳೆಂದು ಹರಸಿದಳು ಕಂದಯ್ಯಗೆ||3||
ತೊಟ್ಟಿಲಾಗಿನ ಕೂಸು ತೊಟ್ಟಿಲಾಗಿರಲಿಕ್ಕೆ
ಉತ್ತತ್ತಿ ಹಣ್ಣನೆ ಕೈಗೆ ಕೊಟ್ಟು
ಮತ್ತೆ ನೂರು ವರುಷ ಹೆಚ್ಚಾಗಿ ಬಾಳೆಂದು
ಹರಸಿದಳು ನಮ್ಮ ಕಂದಯ್ಯಗೆ||4||
ಆಯವಂತನಾಗು ಛಾಯವಂತನಾಗು
ಅಂದಣವನೇರುಅರಸು ನೀನಾಗು
ಹೋಗಿ ಬರುವ ತಂಗಿಗೆ ತೌರುಮನೆಯಾಗೆಂದು
ಗೌರಮ್ಮ ಹರಸಿದಳು ಅಣ್ಣಯ್ಯಗೆ||5||
ಅಂದಣವಂತನಾಗು ಚಂದಣವಂತನಾಗು
ಅಂದಣವ ಏರು ಅರಸು ಆಗು
ಹೋಗಿ ಬರುವ ಕಂದಯ್ಯಗೆ ತೌರುಮನೆ ಆಗೆಂದು
ಹರಸಿದಳು ಮಹಾಲಕ್ಷ್ಮೀ ತಮ್ಮಯ್ಯಗೆ||6||
ಅಕ್ಕ ಮಹಲಕ್ಷ್ಮಿಗೆ ಮಾಡಿಟ್ಟ ಪಾಯಸವು
ಚಿಕ್ಕಣ್ಣ ಕಂದಯ್ಯ ತೆಗೆದುಂಡರೆ
ಕಂದಯ್ಯ ತೆಗೆದುಂಡರೆ ಮಹಾಲಕ್ಷ್ಮೀ ದೇವಿ
ಕೊಪ್ಪವನು ಅಲ್ಲಾಡಿಸಿ ನಗುತಿದ್ದಳು||7||
ತೊಟ್ಟಿಲಾಗಿನ ಕೂಸು ತೊಟ್ಟಿಲಾಗಿರಲಿಕ್ಕೆ
ಉತ್ತತ್ತಿ ಹಣ್ಣನೆ ಕೈಗೆ ಕೊಟ್ಟು
ಮತ್ತೆ ನೂರು ವರುಷ ಹೆಚ್ಚಾಗಿ ಬಾಳೆಂದು
ಹರಸಿದಳು ನಮ್ಮ ಕಂದಯ್ಯಗೆ||4||
ಆಯವಂತನಾಗು ಛಾಯವಂತನಾಗು
ಅಂದಣವನೇರುಅರಸು ನೀನಾಗು
ಹೋಗಿ ಬರುವ ತಂಗಿಗೆ ತೌರುಮನೆಯಾಗೆಂದು
ಗೌರಮ್ಮ ಹರಸಿದಳು ಅಣ್ಣಯ್ಯಗೆ||5||
ಅಂದಣವಂತನಾಗು ಚಂದಣವಂತನಾಗು
ಅಂದಣವ ಏರು ಅರಸು ಆಗು
ಹೋಗಿ ಬರುವ ಕಂದಯ್ಯಗೆ ತೌರುಮನೆ ಆಗೆಂದು
ಹರಸಿದಳು ಮಹಾಲಕ್ಷ್ಮೀ ತಮ್ಮಯ್ಯಗೆ||6||
ಅಕ್ಕ ಮಹಲಕ್ಷ್ಮಿಗೆ ಮಾಡಿಟ್ಟ ಪಾಯಸವು
ಚಿಕ್ಕಣ್ಣ ಕಂದಯ್ಯ ತೆಗೆದುಂಡರೆ
ಕಂದಯ್ಯ ತೆಗೆದುಂಡರೆ ಮಹಾಲಕ್ಷ್ಮೀ ದೇವಿ
ಕೊಪ್ಪವನು ಅಲ್ಲಾಡಿಸಿ ನಗುತಿದ್ದಳು||7||
ಮಂಗಳವಾರದ ದಿವಸ ಮಹಲಕ್ಷ್ಮೀ ತಾಯಿಗೆ
ಮಂಗಳಾರತಿ ಅಕ್ಕಯ್ಯ ಬೆಳಗೆ
ದಂಡಿಗೆಯ ಪದವಿಯ ಗಂಡು ಸಂತಾನವ
ಹಿಂಗದೆ ಕೊಡು ನನ್ನ ಅಣ್ಣಯ್ಯಗೆ||8||
ಶುಕ್ರವಾರವೆ ಅಕ್ಕ ಮಹಾಲಕ್ಷ್ಮೀಗೆ ಚೊಕ್ಕ
ಚಿನ್ನದ ಆರತಿ ಚಿಕ್ಕ ಸೊಸೆಯು ಬೆಳಗೆ
ಅಂದಾದ ಪದವಿಯನು ಗಂಡು ಸಂತಾನವನು
ಕೊಟ್ಟು ರಕ್ಷಿಸಿದಳು ಲಕ್ಷ್ಮೀ ದೇವಿಯೆ||9||
ಹಳ್ಳದಲಿ ಮೈತೊಳೆದು ಒಳ್ಳೆವಸ್ತ್ರವನುಟ್ಟು
ಕಳ್ಳತನದಲಿ ಬಂದು ಶಿವನ ಹೆಂಡತಿಯಾದೆ
ಗುಳ್ಳದಗೌರಿಗೆ ಆರುತಿಯನೆತ್ತೀರೆ ಚೆಲ್ವೆಯರು
ಸಂಭ್ರಮದಿ ಪಾಡುತಲಿ ಬೇಗ||10||
ನಿಂಬೆಯ ವನದಾಗೆ ರಂಭೆ ತಾನಿರುವಳು
ಬಂದೋರಿಗೆಲ್ಲ ಮಂಗಳ ಕೊಡುತಿದ್ದಳು
ನಿಂಬೆಯ ಹಣ್ಣಿನು ಗಂಜಿ ಪ್ರಸಾದವನು
ನಮ್ಮೆಲ್ಲರಿಗೆ ಕೊಟ್ಟಳು ಮಹಾಲಕ್ಷ್ಮೀ ದೇವಿಯೆ||11||
ಬಾಳೆಯ ವನದಾಗೆ ಭಾಮೆ ತಾನಿರುವಳು
ಬಂದೋರಿಗೆಲ್ಲ ವರವ ಕೊಡುತಿಹಳು|
ಬಾಳೆಯ ಹಣ್ಣನು ಬಹಳ ಪ್ರಸಾದವನು
ನಮ್ಮೆಲ್ಲರಿಗೆ ಕೊಟ್ಟಳು ಮಹಾಲಕ್ಷ್ಮೀ ದೇವಿಯೆ||12||
ಮುತ್ತಿನ ಆರತಿ ನವರತ್ನದಾರತಿ
ಮುತ್ತು ಮಾಣಿಕ್ಯ ಬಿಗಿದಾರತೀ
ಮುತ್ತೈದೆರೆಲ್ಲರು ಎತ್ತಿ ಪಾಡುತ್ತಿರಲು
ದೃಷ್ಟಾಂತವಾದರೆ ಆದಿಲಕ್ಷ್ಮಿ ||13||
ಮಂಗಳಾರತಿ ಶ್ಯಾಮಸುಂದರನ ರಾಣಿ
ಪ್ರತ್ಯಕ್ಷವಾದಳೆ ನಮ್ಮೆಲ್ಲರಿಗೆ
ಮಂಗಳಾರತಿ ಶ್ಯಾಮಸುಂದರನ ರಾಣಿ
ಪ್ರತ್ಯಕ್ಷವಾದಳೆ ನಮ್ಮೆಲ್ಲರಿಗೆ||14||
0 ಕಾಮೆಂಟ್‌ಗಳು