ವೃಷಭನೇರಿದ ವಿಷಧರನ್ಶಾರೆ ಪೇಳಮ್ಮಯ್ಯ - Vrushabhanerida Vishadharanyare Pelammayya

|| ಶಿವ ಸ್ತುತಿ ||



ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ | 

ಹಸುಳೆ ಪಾರ್ವತಿಯ ತಪಸಿಗೆ ಮೆಚ್ಚಿದ

ಜಟಾ ಮಂಡಲಧಾರಿ ಕಣಮ್ಮ ॥ ಪ ॥


ಕೈಲಾಸ ಗಿರಿಯ ದೊರೆಯಿವನಮ್ಮ |

ಅದು ಅಲ್ಲದೆ ಕೇಳೆ | 

ಬೈಲು ಸ್ಮಶಾನದಿ ಮನೆಯಿವಗಮ್ಮ ಸಂಕರುಷಣನೆಂದು | 

ಕೇಳೆ ಮಹಿಯೊಳು ಜನ ಪೊಗಳುವರಮ್ಮ

ಇದು ನಿಜವಮ್ಮ | |

ನಾಲಿಗೆ ಸಾಸಿರ ಫಣಿ ಭೂಷಣನಮ್ಮ,

ರಮೆಯರಸಗೆ ಇವ ಮೊಮ್ಮಗನಮ್ಮ ||೧||


ಬಾಲೆ ದಾಕ್ಷಾಯಿಣಿ ಪತಿ ಇವನಮ್ಮ ಮಾವನ ಯಾಗದಲಿ|

ಬ್ಹಾಳ ಕೃತ್ಯಗಳ ನಡೆಸಿದ ನಮ್ಮಸಾಗರದಲ್ಲಿ ಹುಟ್ಟಿದ|

ಕಾಳ ಕೂಟವ ಭಕ್ಷಿಸಿದನಮ್ಮ|ರಾಮನ ದಯವಮ್ಮ|

ಮೇಲೆ ಉಳಿಯಲು ಗರಳಶೇಷವು |

ನೀಲ ಕಂಠನೆಂದು ಎನಿಸಿದನಮ್ಮ || ೨ ||


ಹರನೊಂದಿಗೆ ವೈಕುಂಠಕೆ ಬರಲು ತಾತಗೆ ವಂದಿಸಲು|

ನಿನ್ನ ತರುಣಿ ರೂಪವ ನೋಡುವೆನೆನಲು ಹರಿ ತಾ ನಸು ನಗಲು |

ಕರೆದು ಸೈರಿಸಲಾರೆ ನೀ ಎನಲು | ಹಠದಿ ಕುಳ್ಳಿರಲು |

ಹರನು ಹಠದಿ ಕುಳ್ಳಿರಲು |

ಕರುಣಿಗಳರಸನು ಹರನ ಮನವ ನೋಡಿ

ಅರುಣೋದಯಕೆ ಬಾರೆಂದು ಕಳುಹಿದ ॥ ೩॥


ಅರುಣೋದಯಕೆ ಗಂಗಾಧರ ಬರಲು |

ಹದಿನಾರು ವರುಷದ ತರುಣಿರೂಪದಿ

ಹರಿ ವನದೊಳಗಿರಲು ಚರಣನಖಾಗ್ರದಿ

ಧರಣಿ ಬರೆಯುತ್ತಾ ನಿಂತಿರಲು ಸೆರಗ ಪಿಡಿಯ ಬರಲು 

ಕರದಿ ಶಂಖ ಚಕ್ರ ಗಧೆ ತೋರಲು ಹರನು

ನಾಚಿ ತಲೆ ತಗ್ಗಿಸಿ ನಿಂತ ॥ ೪ ॥


ಮಂಗಳಾಂಗನೆ ಮಾರಜನಕನೆ ನಾ ಮಾಡಿದ ತಪ್ಪು

ಹಿಂಗದೆ ಕೃಮಿಸೋ ಯದುಕುಲ ತಿಲಕ ವರ್ಷದಳೊಪ್ಪುವ |

ನಿನ್ನಂಗನೆ ಮಹಿಯೊಳು ನಖ ಮಹಿ ಮಾಂಕ

ಹೀಗೆನುತಲಿ ತವಕ |

ರಂಗ ವಿಠಲನ ಪದಂಗಳ ಪಿಡಿದು

ಸಾಷ್ಕಾಂಗ ವೆರಗಿ ಕೈಲಾಸಕ್ಕೆ ನಡೆದ ॥ ವೃಷಭ ||









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು