ಸಾರಿ ಬಂದನೆ ಪ್ರಾಣೇಶ ಬಂದನೆ - Saari Bandane Pranesha Bandane

|| ಮಾರುತಿ ಭಜನೆ ||

ರಚನೆ : ಪುರಂದರ ದಾಸರು 





ಸಾರಿ ಬಂದನೆ ಪ್ರಾಣೇಶ ಬಂದನೆ |

ಸಾರಿ ಬಂದು ಲಂಕಾಪುರವ

ಮೀರಿದ ರಾವಣನ ಕಂಡು |

ಧೀರನು ವೈಯಾರದಿಂದ ||ಸಾರಿ ಬಂದನೆ||


ವಾಯುಪುತ್ರನೆ ಶ್ರೀರಾಮನ ದೂತನೆ |

ಪ್ರೀತಿಯಿಂದ ಸೀತಾಂಗನೆಗೆ

ಮುದ್ರಿಕೆಯ ತಂದಿತ್ತವನೆ ||ಸಾರಿ ಬಂದನೆ||


ಭೀಮಸೇನನೆ ಕುಂತಿತನಯನೆ |

ವಿರಾಟನ ಮನೆಯೊಲು ನಿಂತು

 ತಾ ಕೀಚಕನ ಸಂಹರಿಸಿದವನೆ ||ಸಾರಿ ಬಂದನೆ||



ಮಧ್ವರಾಯನೆ ,ಸರ್ವಜ್ಞ ಶ್ರೇಷ್ಠನೆ |

ಅದ್ವ್ಯೆತವ ಗೆದ್ದು ಪುರಂದರವಿಠ್ಠಲನ

ಮುಂದೆ ನಿಂದವನೆ||ಸಾರಿ ಬಂದನೆ||





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು