ವರವ ಕೊಡ ತಾಯಿ ವರವ ಕೊಡ - Varava Kode Thayi Varava koda

|| ಲಕ್ಷ್ಮಿ ಹಾಡು ||

 ರಚನೆ : ಶ್ರೀ ಪ್ರಸನ್ನ ವೆಂಕಟದಾಸರು 


i


ವರವ ಕೊಡ ತಾಯಿ ವರವ ಕೊಡ

ತಾಯಿ ವರವ ಕೊಡ || ಪ ||


ಶರಧಿ ಸಂಪನ್ನೆ ಕೇಳಿ ಸೇರಗೊಡ್ಡಿ ಬೇಡುವಂಥಾ |

ವರವಕೊಡ ತಾಯಿ ವರವ ಕೊಡ ||ಅ .ಪ.||


ಬಲೇವಲ್ಯರಿಷಿಣ ಕರಿಮಣಿ ಕಾಜಿನ ಬಲಿ |

ಅನುಗಾಲ ಇರುವಂತ ವರವಕೊಡಾ |

ತಾಯಿ ವರವ ಕೊಡ ತಾಯಿ ವರವ ಕೊಡ || 1 ||


ಮಾಳಿಗಿ ಮನೆಯೊಳು ಜೋಡು ತೊಟ್ಟಿಲ ಕಟ್ಟಿ |

ಜೋಗುಳ ಪಾಡುವಂತ ವರವ ಕೊಡ |

ತಾಯಿ ವರವಕೊಡ ತಾಯಿ ವರವ ಕೊಡ || 2 ||


ಗಂಡು ಮಕ್ಕಳನ್ಹಡೆದು ಕುಲವನ್ನುದ್ಧರಿಸುವ |

ಬಿಂದುಲಿ ಇಡುವಂತ ಮಗನ ಕೊಡ |

ತಾಯಿ ವರವ ಕೊಡ ತಾಯಿ ವರವ ಕೊಡ || 3 ||


ಹೆಣ್ಣು ಮಕ್ಕಳಾದೆದು ಹೊನ್ನು ಸೇರಾಗಿಲಿ ಕಟ್ಟಿ |

ಕನ್ಯಾದಾನ ಮಾಡುವಂತ ವರವ ಕೊಡ |

ತಾಯಿ ವರವಕೊಡ ತಾಯಿ ವರವ ಕೊಡ || 4 ||


ಬಾಗಿಲು ತೋರಣ ಕಟ್ಟಿ ಮದುವೆ ಮುಂಜಿ ನಾಮಕರಣ |

ಅನುಗಾಲ ಇರುವಂತ ವರವ ಕೊಡ |

ತಾಯಿ ವರವ ಕೊಡ ತಾಯಿ ವರವ ಕೊಡ || 5 ||


ಅನುದಿನ ಬ್ರಾಹ್ಮಣರಿಗೆ ಅನ್ನ ದಕ್ಷಿಣೆ ಕೊಟ್ಟು |

ತಿಳಿನೀರು ಕೊಡುವಂತ ವರವ ಕೊಡ |

ತಾಯಿ ವರವ ಕೊಡ ತಾಯಿ ವರವ ಕೊಡ || 6 ||


ಅನ್ನ ದಾನ ವಸ್ತ್ರ ದಾನ ಗೃಹ ದಾನ ಭೂ ದಾನ |

ಗೋದಾನ ಕೊಡುವಂತ ವರವ ಕೊಡ |

ತಾಯಿ ವರವ ಕೊಡ ವರವ ಕೊಡ || 7 ||


ರಂಗ ನಾಯಕಿ ನಿನ್ನ ಮುಡಿಯ ಮೇಲಿರುವಂತ|

ಪ್ರಸನ್ನವೆಂಕಟನರಸಿ ಹೂವ ಕೊಡ ಐದು ಹೂವ ಕೊಡ |

ತಾಯಿ ವರವ ಕೊಡ ತಾಯಿ ವರವ ಕೊಡ || 8 ||






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು